Home ಟಾಪ್ ಸುದ್ದಿಗಳು ಬೆಳ್ತಂಗಡಿ | ಬೈಕ್’ಗೆ ಬಸ್ ಡಿಕ್ಕಿ: ಓರ್ವ ಮೃತ್ಯು

ಬೆಳ್ತಂಗಡಿ | ಬೈಕ್’ಗೆ ಬಸ್ ಡಿಕ್ಕಿ: ಓರ್ವ ಮೃತ್ಯು

ಬೆಳ್ತಂಗಡಿ: ಬೈಕ್’ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಲಾಯಿಲ ಗ್ರಾಮದ ಕೊಯ್ಯೂರು ಕ್ರಾಸ್ ಸಮೀಪ ನಡೆದಿದೆ.


ಬಂಟ್ವಾಳ ತಾಲೂಕಿನ ನಾವೂರು ಮಲೆಬಾವು ನಿವಾಸಿ ವಿಜಯ್ (25) ಮೃತ ಯುವಕ ಎಂದು ಗುರುತಿಸಲಾಗಿದೆ.
ಸಹ ಸವಾರ ಶೈಲೇಶ್ (25) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ವಿಜಯ್ ಸಂಜೆ ಕೆಲಸ ಮುಗಿಸಿ ಬೈಕ್ ನಲ್ಲಿ ಬಂಟ್ವಾಳದಲ್ಲಿರುವ ಮನೆ ಕಡೆ ಇಬ್ಬರೂ ತೆರಳುತ್ತಿದ್ದರು. ಈ ವೇಳೆ ಬಸ್ ಬೈಕ್’ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version