Home ಟಾಪ್ ಸುದ್ದಿಗಳು ಇಸ್ರೇಲ್‌ ನಿಂದ ಫೆಲೆಸ್ತೀನಿಯರ ಮೇಲೆ ಗುಂಡಿನ ದಾಳಿ: ಓರ್ವ ಬಾಲಕ ಮೃತ್ಯು

ಇಸ್ರೇಲ್‌ ನಿಂದ ಫೆಲೆಸ್ತೀನಿಯರ ಮೇಲೆ ಗುಂಡಿನ ದಾಳಿ: ಓರ್ವ ಬಾಲಕ ಮೃತ್ಯು

ಜೆರುಸಲೇಮ್‌: ವೆಸ್ಟ್‌ಬ್ಯಾಂಕ್‌ನಲ್ಲಿ ಪ್ರತಿಭಟನೆ ನಡೆಸುವ ವೇಳೆ ಫೆಲೆಸ್ತೀನಿಯರ ಮೇಲೆ ಇಸ್ರೇಲ್‌ ಪಡೆಗಳು ಶನಿವಾರ ಗುಂಡಿನ ದಾಳಿ ನಡೆಸಿದವು. ಈ ಘಟನೆಯಲ್ಲಿ 16 ವರ್ಷದ ಫೆಲೆಸ್ತೀನಿ ಬಾಲಕ ಮೃತಪಟ್ಟಿದ್ಧಾನೆ ಎಂದು ಇಸ್ರೇಲ್‌ ಹಾಗೂ ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

‘ರಮಲ್ಲಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೊಹಮ್ಮದ್ ಅಬ್ದಲ್ಲಾ ಹಮೇದ್‌ ಎಂಬ ಬಾಲಕಗೊಂಡಿದ್ದ. ನಂತರ, ಆತನನ್ನು ಇಸ್ರೇಲ್‌ ಪಡೆಗಳು ತಮ್ಮ ವಶಕ್ಕೆ ಪಡೆದವು. ಬಾಲಕ, ಇಸ್ರೇಲ್‌ ಪಡೆಗಳ ವಶದಲ್ಲಿದ್ದಾಗ ಮೃತಪಟ್ಟಿದ್ದಾನೆ’ ಎಂದು ಫೆಲೆಸ್ತೀನ್ ಸುದ್ದಿಸಂಸ್ಥೆ ವಫಾ ತಿಳಿಸಿದೆ.

‘ಕಲ್ಲು ತೂರಾಟದಲ್ಲಿ ತೊಡಗಿದ್ದವರತ್ತ ಸೈನಿಕರು ಗುಂಡು ಹಾರಿಸಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿಗೆ ಗಾಯಗಳಾಗಿವೆ’ ಎಂದು ಒಪ್ಪಿಕೊಂಡಿರುವ ಇಸ್ರೇಲ್ ಪಡೆಗಳು, ಗಾಯಾಳುವಿನ ಸ್ಥಿತಿ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ.

Join Whatsapp
Exit mobile version