ಸುಳ್ಯ: ಕುತುಬಿಯಾ ಜುಮಾ ಮಸೀದಿ, ನುಜುಮುಲ್ ಇಸ್ಲಾಂ ಎಸೋಸಿಯೇಶನ್ ಗಂಡಿಬಾಗಿಲು ಮತ್ತು ಎಸ್.ಕೆ.ಎಸ್.ಎಸ್ ಗಂಡಿಬಾಗಿಲು ಶಾಖೆ ಇವುಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 26ರಂದು ನಡೆಯುವ ಮರ್ ಹೂಮ್ ಡಾ. ಕೆ.ಎಂ ಶಾಹ್ ಮುಸ್ಲಿಯಾರ್’ರವರ ಮಕ್ಬರ ಕಟ್ಟಡದ ಉದ್ಘಾಟನೆ ಹಾಗೂ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮದ ಪೋಸ್ಟರ್ ರನ್ನು ಅರಂತೋಡಿನಲ್ಲಿ ನಡೆದ ಸಮಾರಂಭದಲ್ಲಿ ಗಂಡಿಬಾಗಿಲು ಜಮಾಅತ್ ಅಧ್ಯಕ್ಷ ಆದಂ ಹಾಜಿ ಬಡ್ದಮ್ಮೆ ಅವರು ಅರಂತೋಡು ಜುಮಾ ಮಸೀದಿಯ ಖತೀಬ್ ಹಾಜಿ ಇಸಾಕ್ ಬಾಖವಿಯವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ, ಶಾಹ್ ಮುಸ್ಲಿಯಾರ್ ರವರು ಅರಂತೋಡು ಬದ್ರಿಯಾ ಜುಮಾ ಮಸೀದಿಯ ಧರ್ಮ ಗುರುಗಳಾಗಿ 35 ವರ್ಷಗಳ ಕಾಲ ನಿಷ್ಕಳಂಕವಾಗಿ ಸೇವೆ ಸಲ್ಲಿಸಿದ್ದು, ಇಲ್ಲಿನ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು. ಆದುದರಿಂದ ಡಿಸಂಬರ್ 26 ರಂದು ಗಂಡಿಬಾಗಿಲಿನಲ್ಲಿ ನಡೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಸಮಾರಂಭದಲ್ಲಿ ಗಂಡಿಬಾಗಿಲು ಜಮಾಅತ್ ಕಾರ್ಯದರ್ಶಿ ಎಸ್.ಆದಂ ಹಾಜಿ, ಅರಂತೋಡು ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಕಾರ್ಯದರ್ಶಿ ಕೆ. ಎಂ ಮೂಸಾನ್, ದಿಕ್ರ್ ಸ್ವಲಾತ್ ಉಪಾಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಜಮಾಅತ್ ನಿರ್ದೇಶಕರಾದ ಅಬ್ದುಲ್ ಖಾದರ್ ಪಠೇಲ್, ಅಮೀರ್ ಕುಕ್ಕುಂಬಳ, ಮೊಯಿದು ಕುಕ್ಕುಂಬಳ, ಸಂಶುದ್ದೀನ್ ಪೆಲ್ತಡ್ಕ, ಯುವ ಉದ್ಯಮಿ ಸೈಪುದ್ದೀನ್ ಪಠೇಲ್, ರಿಯಾಝ್ ಗಂಡಿಬಾಗಿಲು, ಕಲಂದರ್ ಗಂಡಿಬಾಗಿಲು, ನಿಸಾರ್ ಗಂಡಿಬಾಗಿಲು, ಅರಂತೋಡು ಎಸ್.ಕೆ.ಎಸ್.ಎಸ್ ಶಾಖೆಯ ಅಧ್ಯಕ್ಷ ಆಶಿಕ್ ಕುಕ್ಕುಂಬಳ, ಕಾರ್ಯದರ್ಶಿ ಮುಝಮ್ಮಿಲ್ ಕುಕ್ಕುಂಬಳ, ವಿಕಾಯ ಸದಸ್ಯರಾದ ತಾಜುದ್ದೀನ್ ಅರಂತೋಡು, ಜುಬೈರ್ ಎಸ್.ಇ, ಅನ್ವಾರುಲ್ ಹುದಾ ಅಸೋಸಿಯೇಶನ್ ಕಾರ್ಯದರ್ಶಿ ಪಸೀಲು, ಕೋಶಾಧಿಕಾರಿ ಅಝರುದ್ದೀನ್ , ನಿವೃತ್ತ ಉಪನ್ಯಾಸಕ ಎ.ಅಬ್ದುಲ್ಲ, ಎ.ಉಮ್ಮರ್, ಜವಾದ್ ಪಾರೆಕ್ಕಲ್, ಮುಜೀಬ್, ಲತೀಫ್ ಮೊಟ್ಟೆಂಗಾರ್ ಹಮೀದ್ ಅಡಿಮರಡ್ಕ ಮೊದಲಾದವರು ಉಪಸ್ಥಿತರಿದ್ದರು.