Home ಟಾಪ್ ಸುದ್ದಿಗಳು ಉತ್ತರ ಪ್ರದೇಶ: ಗೋ ಸಾಗಾಟದ ಹೆಸರಿನಲ್ಲಿ ಸಂಘಪರಿವಾರದಿಂದ ಮುಸ್ಲಿಮ್ ಚಾಲಕನ ಮೇಲೆ ಗಂಭೀರ ಹಲ್ಲೆ

ಉತ್ತರ ಪ್ರದೇಶ: ಗೋ ಸಾಗಾಟದ ಹೆಸರಿನಲ್ಲಿ ಸಂಘಪರಿವಾರದಿಂದ ಮುಸ್ಲಿಮ್ ಚಾಲಕನ ಮೇಲೆ ಗಂಭೀರ ಹಲ್ಲೆ

ಮಥುರಾ: ಸ್ವಚ್ಛತಾ ಅಭಿಯಾನದ ಅಂಗವಾಗಿ ಸ್ಥಳೀಯ ಪ್ರದೇಶದಲ್ಲಿ ನಡೆಸಿದ ಸ್ವಚ್ಛತೆಯ ವೇಳೆ ಸಿಕ್ಕಿದ ಪ್ರಾಣಿಗಳ ಎಲುಬನ್ನು ತನ್ನ ಪಿಕ್ ಅಪ್ ವಾಹನದಲ್ಲಿ ಸಾಗಿಸುತ್ತಿದ್ದ ಮುಸ್ಲಿಮ್ ಚಾಲಕನ ಮೇಲೆ ಸಂಘಪರಿವಾರದ ಕಾರ್ಯಕರ್ತರು ಗೋ ಮಾಂಸ ಸಾಗಾಟ ಆರೋಪ ಹೊರಿಸಿ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮಥುರಾ ಸಮೀಪದ ರಾಲ್ ಎಂಬಲ್ಲಿ ಪಿಕ್ ಅಪ್ ಚಾಲಕನಾದ ಮುಹಮ್ಮದ್ ಅಮೀರ್ ಎಂಬಾತನ ಮೇಲೆ ಗೋಮಾಂಸ ಸಾಗಾಟ ಆರೋಪ ಹೊರಿಸಿ ಸಂಘಪರಿವಾರದ ಕಾರ್ಯಕರ್ತರು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ.

https://twitter.com/i/status/1505945873875804163

ಸಂತ್ರಸ್ತ ಅಮೀರ್ ಅವರನ್ನು ಸುತ್ತುವರಿದ ಸಂಘಪರಿವಾರದ ಕಾರ್ಯಕರ್ತರು ಆತನ ಶರ್ಟ್ ಕಿತ್ತು ಹಾಕಿ ಬೆಲ್ಟ್ ನಲ್ಲಿ ಗಂಭೀರವಾಗಿ ಹಲ್ಲೆ ನಡೆಸಿದ್ದು, ಇದರ ದೃಶ್ಯವಾಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಮೀರ್ ಅವರು ತನ್ನ ವಾಹನದಲ್ಲಿ ಪ್ರಾಣಿಗಳ ಮೂಳೆ, ಸತ್ತ ಪ್ರಾಣಿಗಳನ್ನು ಸಾಗಿಸುತ್ತಿದ್ದರು. ಈ ವೇಳೆ ವಾಹನ ತಡೆದು ನಿಲ್ಲಿಸಿದ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಅಮೀರ್ ಅವರ ಮುಖ ಮತ್ತು ಭುಜದ ಮೇಲೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಅಮೀರ್ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು 16 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, 14 ಮಂದಿ ಹಲ್ಲೆಕೋರರನ್ನು ಗುರಿತಿಸಲಾಗಿದೆ ಎಂದು ಮಥುರಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ತಾಂಡ್ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

Join Whatsapp
Exit mobile version