Home ಟಾಪ್ ಸುದ್ದಿಗಳು ಆ. 26ಕ್ಕೆ SP ಕಚೇರಿ ಮುತ್ತಿಗೆ, ಸಿದ್ದು ಬರಲಿ ನೋಡೋಣ; ಕೆ.ಜಿ ಬೋಪಯ್ಯ ಸವಾಲು

ಆ. 26ಕ್ಕೆ SP ಕಚೇರಿ ಮುತ್ತಿಗೆ, ಸಿದ್ದು ಬರಲಿ ನೋಡೋಣ; ಕೆ.ಜಿ ಬೋಪಯ್ಯ ಸವಾಲು

ಕೊಡಗು: ಮಳೆಹಾನಿ ವೀಕ್ಷಿಸಲು ಮಾಜಿ ಸಿ.ಎಂ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘಪರಿವಾರ ಕಾರ್ಯಕರ್ತರು ಮೊಟ್ಟೆ ಎಸಿದಿದ್ದನ್ನ ಖಂಡಿಸಿ SP ಕಚೇರಿಗೆ ಮುತ್ತಿಗೆ ಹಾಕೋದಾಗಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರೋ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ, ಬರಲಿ ನೋಡೋಣಾ ಅಂತ ಸವಾಲು ಹಾಕಿದ್ದಾರೆ.

ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೋಪಯ್ಯ, ಇಲ್ಲಿ ಪೊಲೀಸ್ ಭದ್ರತೆಯಲ್ಲಿ ಯಾವ ವೈಫಲ್ಯವೂ ಆಗಿಲ್ಲ. ಸಿದ್ದರಾಮಯ್ಯನವರ ಸರ್ವಾಧಿಕಾರಿ ಧೋರಣೆ ಸರಿಯಲ್ಲ. ಪೊಲೀಸ್ ವಿರುದ್ಧ ಧಮಕಿ ಹಾಕುವುದು ಬೇಡ. 26 ರಂದು ಮುತ್ತಿಗೆ ಹಾಕುತ್ತೇವೆ ಎಂದಿರುವುದನ್ನು ನಾವು ಸವಾಲಾಗಿ ಸ್ವೀಕರಿಸುತ್ತೇವೆ. ಸಿದ್ದರಾಮಯ್ಯ ಮೊದಲು ಅವರ ಈ ನಡವಳಿಕೆಯನ್ನು ತಿದ್ದಿಕೊಳ್ಳಲಿ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶ ಇರುವಂತೆ ನಮ್ಮ ಪಕ್ಷದ ಕಾರ್ಯಕರ್ತರು ಹಾಗ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಂಕೇತಿಕ ಪ್ರತಿಭಟನೆ ಮಾಡಿದ್ದಾರೆ ಅಷ್ಟೇ. ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಮುತ್ತಿಗೆ ಹಾಕೋದನ್ನ ನಾವು ಸವಾಲು ಅಂತ ಸ್ವೀಕರಿಸುತ್ತೇವೆ ಎಂದು ಹೇಳಿದರು.

Join Whatsapp
Exit mobile version