Home ಟಾಪ್ ಸುದ್ದಿಗಳು ನೀರಿನಲ್ಲಿ ಕೊಚ್ಚಿ ಹೋದ ಓಮ್ನಿ, ಚಾಲಕ ಪಾರು, ಪ್ರಯಾಣಿಕ ನಾಪತ್ತೆ

ನೀರಿನಲ್ಲಿ ಕೊಚ್ಚಿ ಹೋದ ಓಮ್ನಿ, ಚಾಲಕ ಪಾರು, ಪ್ರಯಾಣಿಕ ನಾಪತ್ತೆ

ತುಮಕೂರು: ಓಮ್ನಿಯೊಂದು ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಘಟನೆ ತುರುವೇಕೆರೆ ತಾಲೂಕಿನ ಕೊಂಡಜ್ಜಿ ಕ್ರಾಸ್ ಬಳಿ ನಡೆದಿದೆ.

ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿನಲ್ಲಿದ್ದ ಇನ್ನೊಬ್ಬ ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕಲ್ಲೂರು ಕ್ರಾಸ್ ರಸ್ತೆಯಲ್ಲಿರುವ ಸೂಪ್ಪನಹಳ್ಳಿ ಹಳ್ಳದಲ್ಲಿ ಓಮ್ನಿ ಕಾರು ಕೊಚ್ಚಿ ಹೋಗಿದೆ. ಸ್ಥಳೀಯರ ಸಹಾಯದಿಂದ ಚಾಲಕ ಪುಟ್ಟಸಿದ್ದಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರಿನಲ್ಲಿದ್ದ 70 ವರ್ಷದ ಪಟೇಲ್ ಕುಮಾರಯ್ಯ ಕಾಣೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರೆದಿದೆ. ಸ್ಥಳಕ್ಕೆ ತುರುವೇಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version