ಡೆಲ್ಟಾಕ್ಕಿಂತ ‘ಒಮಿಕ್ರಾನ್’ ಮೂರು ಪಟ್ಟು ಹೆಚ್ಚು ವೇಗದಲ್ಲಿ ಹರಡುತ್ತಿದೆ: ಕೇಂದ್ರ ಎಚ್ಚರಿಕೆ

Prasthutha|

ನವದೆಹಲಿ : ಒಮಿಕ್ರಾನ್ ರೂಪಾಂತರವು ಡೆಲ್ಟಾಕ್ಕಿಂತ ಕನಿಷ್ಠ ಮೂರು ಪಟ್ಟು ಹೆಚ್ಚು ವೇಗವಾಗಿ ಹರಡುತ್ತದೆ ಎಂದು ಇದುವರೆಗಿನ ಡೇಟಾಗಳು ಸೂಚಿಸುತ್ತವೆ ಎಂದು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ.

- Advertisement -

ಇದಲ್ಲದೆ ಓಮಿಕ್ರಾನ್ ನಿಂದ ಬಾಧಿತರಾಗುವ ಜನಸಂಖ್ಯೆಯ ಬಗ್ಗೆ ಡೇಟಾವನ್ನು ಸಂಗ್ರಹಿಸುವುದಕ್ಕಾಗಿ ಕೋವಿಡ್-19 ವಾರ್ ರೂಮ್ ಗಳನ್ನು ಪುನಾರಂಭಗೊಳಿಸಲು ರಾಜ್ಯಗಳಿಗೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.ಭಾರತದಲ್ಲಿ ಕೋವಿಡ್ 19 ಪ್ರಕರಣಗಳ ಉಲ್ಬಣದ ಆರಂಭಿಕ ಚಿಹ್ನೆಗಳು ಮತ್ತು ದೇಶದ ವಿವಿಧ ಭಾಗಗಳಲ್ಲಿ ಓಮಿಕ್ರಾನ್ ರೂಪಾಂತರದ ಹೆಚ್ಚಿದ ಪತ್ತೆಹಚ್ಚುವಿಕೆಯ ದೃಷ್ಟಿಯಿಂದ ಇದು ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮಂಗಳವಾರ, ಒಡಿಶಾ ಕೂಡ ದೃಢಪಡಿಸಿದ ಓಮಿಕ್ರಾನ್ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಗೆ ಸೇರಿದೆ. ಹೀಗಾಗಿ ದೇಶಾದ್ಯಂತ ಒಟ್ಟು ಪ್ರಕರಣಗಳು 202ಕ್ಕೆ ಏರಿಕೆಯಾಗಿದೆ.

Join Whatsapp