ಒಮಿಕ್ರಾನ್ ಕೊನೆಯ ರೂಪಾಂತರವಲ್ಲ, ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಕಾರಣವಾಗಬಹುದು: WHO ಎಚ್ಚರಿಕೆ

Prasthutha|

ಜಿನೀವಾ: ಕೋವಿಡ್ – 19ರ ರೂಪಾಂತರವಾದ ಒಮಿಕ್ರಾನ್ ಅಪಾಯಕಾರಿಯಲ್ಲ ಎಂಬ ವಾದವನ್ನು ವಿಶ್ವ ಆರೋಗ್ಯ ಸಂಸ್ಥೆ ತಿರಸ್ಕರಿಸಿದೆ.

- Advertisement -


ಹಿಂದಿನ ರೂಪಾಂತರಗಳಂತೆ ಒಮಿಕ್ರಾನ್ ಕೂಡಾ ಅಪಾಯಕಾರಿಯಾಗಿದೆ. ರೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಿಸಲು ಮತ್ತು ಸಾವಿಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಥನೋಮ್ ಗೆಬ್ರಿಯೇಸಸ್ ಮುನ್ನೆಚ್ಚರಿಕೆ ನೀಡಿದ್ದಾರೆ.


ಡೆಲ್ಟಾ ರೂಪಾಂತರಕ್ಕಿಂತ ಒಮಿಕ್ರಾನ್ ಹೆಚ್ಚು ಜನರಿಗೆ ಹರಡುತ್ತಿದೆ. ವಿಶ್ವದ ಅನೇಕ ಭಾಗಗಳಲ್ಲಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಲಸಿಕೆಯನ್ನು ಪಡೆದವರಲ್ಲಿ ಡೆಲ್ಟಾಗಿಂತ ಕಡಿಮೆ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುವ ಕಾರಣ ಒಮಿಕ್ರಾನನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇತರ ರೂಪಾಂತರಗಳಂತೆ, ಜನರಲ್ಲಿ ಆರೋಗ್ಯ ಸಮಸ್ಯೆಗಳುಂಟಾಗಿ ಸಾವಿಗೆ ಕಾರಣವಾಗುತ್ತವೆ ಎಂದು ಮುನ್ನೆಚ್ಚರಿಕೆ ನೀಡಿದರು. ಎಲ್ಲೆಡೆ ಲಸಿಕೆಗಳ ಕೊರತೆಯು ಹೊಸ ರೂಪಾಂತರಗಳಿಗೆ ಕಾರಣವಾಗಿದೆ. ಶ್ರೀಮಂತ ರಾಷ್ಟ್ರಗಳು ಇನ್ನಾದರೂ ಲಸಿಕೆಯನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಾಗಿರಬೇಕು ಎಂದು ಅವರು ಹೇಳಿದರು.

- Advertisement -


ವಿಶ್ವ ಆರೋಗ್ಯ ಸಂಸ್ಥೆಯ ಒಟ್ಟು 194 ರಾಷ್ಟ್ರಗಳಲ್ಲಿ, ಕನಿಷ್ಠ 92 ದೇಶಗಳಿಗೆ ಕೂಡ 2021ರ ಅಂತ್ಯದ ವೇಳೆಗೆ ಗುರಿಯಿಟ್ಟುಕೊಂಡಿದ್ದ ಲಸಿಕೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದೂ ಅವರು ಹೇಳಿದರು. ಒಮಿಕ್ರಾನ್ ರೂಪಾಂತರದೊಂದಿಗೆ ಕೋವಿಡ್ ಕೊನೆಗೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.



Join Whatsapp