Home ಕ್ರೀಡೆ ಒಮಿಕ್ರಾನ್ ಭೀತಿ ಹಿನ್ನಲೆ: ಭಾರತ-ಸೌತ್ ಆಫ್ರಿಕಾ ನಡುವಿನ ಟಿ20 ಪಂದ್ಯಾವಳಿ ಮುಂದೂಡಿಕೆ !

ಒಮಿಕ್ರಾನ್ ಭೀತಿ ಹಿನ್ನಲೆ: ಭಾರತ-ಸೌತ್ ಆಫ್ರಿಕಾ ನಡುವಿನ ಟಿ20 ಪಂದ್ಯಾವಳಿ ಮುಂದೂಡಿಕೆ !

ನವದೆಹಲಿ: ಹೊಸ ಕೋವಿಡ್-19 ರೂಪಾಂತರವಾದ ‘ಒಮಿಕ್ರಾನ್ ‘ ಬಗ್ಗೆ ಹೆಚ್ಚುತ್ತಿರುವ ಜಾಗತಿಕ ಕಳವಳಗಳ ನಡುವೆ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಒಂದು ವಾರದವರೆಗೆ ಮತ್ತಷ್ಟು ಮುಂದೂಡಿಕೆ ಆಗುವ ಸಾದ್ಯತೆ ಇದೆ ಎನ್ನಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಹೊಸ ಕೋವಿಡ್-19 ವೇರಿಯಂಟ್ ಬಿ.1.1.529 ಅನ್ನು ‘ಕಾಳಜಿಯ ರೂಪಾಂತರ’ ಎಂದು ಘೋಷಿಸಿದೆ. ಇದೇ ಸಂದರ್ಭದಲ್ಲಿ ಡಿಸೆಂಬರ್ 17ರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೂರು ಟೆಸ್ಟ್, ಮೂರು ಏಕ ದಿನದ ಪಂದ್ಯಾವಳಿ ಹಾಗೂ ನಾಲ್ಕು ಟಿ20 ಪಂದ್ಯಗಳನ್ನು ಆಯೋಜಿಸಲಾಗಿತ್ತು. ಆದ್ರೇ ಒಮಿಕ್ರಾನ್ ವೈರಸ್ ಭೀತಿಯಿಂದ ಈ ಪಂದ್ಯಾವಳಿಗಳು ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ಬಿಸಿಸಿಐ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಸರಣಿಯ ಭವಿಷ್ಯದ ಬಗ್ಗೆ ಶೀಘ್ರದಲ್ಲೇ ನಿರ್ಧರಿಸಲಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಒಮೈಕ್ರಾನ್ ಕೋವಿಡ್ ರೂಪಾಂತರದ ಬೆದರಿಕೆಯಿಂದಾಗಿ ಸರಣಿಯನ್ನು ಒಂದು ವಾರ ಮುಂದೂಡುವ ಬಗ್ಗೆ ಚರ್ಚಿಸುತ್ತಿದ್ದೇವೆ. ನಾವು ಭಾರತ ಸರ್ಕಾರದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಎರಡೂ ಮಂಡಳಿಗಳು ನಿರಂತರ ಸಂಪರ್ಕದಲ್ಲಿವೆ ಮತ್ತು ಎಲ್ಲವನ್ನೂ ಚರ್ಚಿಸಲಾಗುತ್ತಿದೆ. ನಮ್ಮ ಆಟಗಾರರ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp
Exit mobile version