ಸರಕಾರಿ ಮತ್ತು ಖಾಸಗಿ ಸಂಸ್ಥೆಯಲ್ಲಿ ಒಮಾನ್ ಪೌರರಿಗೆ ಉದ್ಯೋಗ ನೀಡಬೇಬೇಕೆಂದು ಮತ್ತು ಇನ್ನಿತರ ಕೆಲವೊಂದು ಬೇಡಿಕೆಗಳನ್ನಿಟ್ಟು ಒಮಾನ್‌ನ ಸೊಹಾರ್‌ನಲ್ಲಿ ಇಲ್ಲಿನ ನಾಗರಿಕರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ.
ಆದರೆ ಒಮಾನ್ ಕಾನೂನಿನಡಿಯಲ್ಲಿ ರಸ್ತೆಗಳನ್ನು ನಿರ್ಬಂಧಿಸುವುದು, ಸಾರಿಗೆ ವಾಹನಗಳನ್ನು ವಶಪಡಿಸಿಕೊಳ್ಳುವುದು, ರಸ್ತೆಯಲ್ಲಿ ಚಲಿಸುವ ವಾಹನಗಳ ಮೇಲೆ ಮತ್ತು ಪಾದಾಚಾರಿಗಳ ಮೇಲೆ ಹಲ್ಲೆ ನಡೆಸುವುದು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯನ್ನು ಹಾಳುಮಾಡವುದು ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಈ ಮೇಲಿನ ಅಪರಾಧಕ್ಕಾಗಿ ಪ್ರತಿಭಟನೆಯಲ್ಲಿದ್ದ ಕೆಲವು ಜನರನ್ನು ರಾಯಲ್ ಓಮನ್ ಪೊಲೀಸರು (ಆರ್‌ಒಪಿ) ಬಂಧಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.