ಒಲಿಂಪಿಕ್ಸ್’ನಲ್ಲಿ ಚಿನ್ನದ ಪದಕ ವಿಜೇತೆ ಅನುಮಾನಾಸ್ಪದ ಸಾವು

Prasthutha|

ವಾಷಿಂಗ್ಟನ್: ಒಲಿಂಪಿಕ್ಸ್’ನಲ್ಲಿ ಮೂರು ಪದಕಗಳು ಹಾಗೂ ಎರಡು ಬಾರಿ ವಿಶ್ವಚಾಂಪಿಯನ್ ಶಿಪ್ ಪ್ರಶಸ್ತಿಗಳನ್ನು ಗೆದ್ದಿದ್ದ ಟೋರಿ ಬೋವಿ (32) ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

- Advertisement -

ಬೋವಿ ಅವರು ಹಲವು ದಿನಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ತೆರಳಿದ್ದ ಫ್ಲೋರಿಡಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಟೋರಿ ಬೋವಿ 2016ರ ಒಲಿಂಪಿಕ್ಸ್’ನಲ್ಲಿ ಮೂರು ಪದಗಳನ್ನು ಬಾಚಿಕೊಂಡಿದ್ದರು. 4*100 ಮೀಟರ್ ರಿಲೇನಲ್ಲಿ ಚಿನ್ನದ ಪದಕ, 100 ಮೀಟರ್ ರಿಲೇನಲ್ಲಿ ಬೆಳ್ಳಿ ಹಾಗೂ 200 ಮೀಟರ್ ಓಟದಲ್ಲಿ ಕಂಚಿನ ಪದಕಗಳನ್ನ ಗೆದ್ದಿದ್ದರು. 2017ರ ವಿಶ್ವಚಾಂಪಿಯನ್ಶಿಪ್ ನಲ್ಲಿ 100 ಮೀಟರ್ ಓಟ ಮತ್ತು 4*100 ಮೀಟರ್ ರಿಲೇನಲ್ಲಿ ಚಿನ್ನದ ಪದಕ, 2019ರಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಲಾಂಗ್ ಜಂಪ್ ನಲ್ಲಿ 4ನೇ ಸ್ಥಾನ ಪಡೆದು ಮಿಂಚಿದ್ದರು.

- Advertisement -

ಐಒಸಿ ಅಧ್ಯಕ್ಷ ಥಾಮಸ್ ಬಾಚ್ ತಮ್ಮ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಟೋರಿ ಬೋವಿ ಹಠಾತ್ ನಿಧನವು ಆಘಾತ ತಂದಿದೆ. ಅವರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ಬರೆದುಕೊಂಡಿದ್ದಾರೆ.