Home ಟಾಪ್ ಸುದ್ದಿಗಳು ಹಳೆಯ ಸಂಸತ್ತಿನ ಕಟ್ಟಡ ಇನ್ನು ಮುಂದೆ ಸಂವಿಧಾನ್ ಸದನ್

ಹಳೆಯ ಸಂಸತ್ತಿನ ಕಟ್ಟಡ ಇನ್ನು ಮುಂದೆ ಸಂವಿಧಾನ್ ಸದನ್

ಹೊಸದಿಲ್ಲಿ: ಹಳೆ ಸಂಸತ್ತು ಭವನದ ಸೆಂಟ್ರಲ್‌ ಭವನದಲ್ಲಿ ಎರಡು ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ನರೇಂದ್ರ ಮೋದಿ, ಹಳೆಯ ಸಂಸತ್ ಭವನವನ್ನು ಇನ್ನು ಮುಂದೆ ‘ಸಂವಿಧಾನ್ ಸದನ್’ ಎಂದು ಕರೆಯಲಾಗುವುದು ಎಂದು ಘೋಷಿಸಿದ್ದಾರೆ. ಈ ಕಟ್ಟಡವನ್ನು ಈಗ ‘ಸಂವಿಧಾನ್ ಸದನ್’ ಎಂದು ಕರೆಯಬೇಕೆಂದು ನಾನು ವಿನಂತಿಸುತ್ತೇನೆ ಎಂದು ಅವರು ಹೇಳಿದ್ದಾರೆ.


ಸೋಮವಾರ ಹಳೆಯ ಸಂಸತ್ ಕಟ್ಟಡದಲ್ಲಿ ಕೊನೆಯ ಅಧಿವೇಶನಗಳನ್ನು ನಡೆಸಲಾಗಿತ್ತು. ವಿಶೇಷ ಅಧಿವೇಶನದ ಉಳಿದ ಅಧಿವೇಶನಗಳನ್ನು ಸೆಪ್ಟೆಂಬರ್ 19 ರ ಮಂಗಳವಾರದಿಂದ ಹೊಸ ಸಂಸತ್ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಲೋಕಸಭಾ ಎಲ್‌ಒಪಿ ಅಧೀರ್ ರಂಜನ್ ಚೌಧರಿ, ರಾಜ್ಯಸಭಾ ಎಲ್‌ಒಪಿ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ನಾಯಕ ಪಿಯೂಷ್ ಗೋಯಲ್ ಮತ್ತು ಮೇನಕಾ ಗಾಂಧಿ ಅವರು ಸಂಸತ್ ಭವನದ ಪರಂಪರೆಯನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Join Whatsapp
Exit mobile version