Home ಟಾಪ್ ಸುದ್ದಿಗಳು ಭಾರತದಲ್ಲಿ ಮುಸ್ಲಿಮರ ಮೇಲೆ ನಿರಂತರ ದಾಳಿ: OIC ತೀವ್ರ ಕಳವಳ

ಭಾರತದಲ್ಲಿ ಮುಸ್ಲಿಮರ ಮೇಲೆ ನಿರಂತರ ದಾಳಿ: OIC ತೀವ್ರ ಕಳವಳ

ಲಕ್ನೋ: ಭಾರತದಲ್ಲಿ ಮುಸ್ಲಿಮರು ಮತ್ತು ಆರಾಧನಾ ಸ್ಥಳಗಳನ್ನು ಗುರಿಯಾಗಿಸಿ ನಿರಂತರ ದಾಳಿ, ವಿವಿಧ ರಾಜ್ಯಗಳಲ್ಲಿ ಮುಸ್ಲಿಮ್ ವಿರೋಧಿ ಕಾಯ್ದೆ ಮತ್ತು ಮುಸ್ಲಿಮರ ವಿರುದ್ಧ ವ್ಯಾಪಕವಾಗುತ್ತಿರುವ ಹಿಂಸಾಚಾರ ಕುರಿತು ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಪರೇಷನ್ (OIC) ಪ್ರಧಾನ ಕಾರ್ಯದರ್ಶಿ ಹಿಸ್ಸೇನ್ ಬ್ರಾಹಿಂ ತಾಹಾ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಸೌದಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕರ್ನಾಟಕ ರಾಜ್ಯದಲ್ಲಿ ಇತ್ತೀಚೆಗೆ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಕುರಿತು OIC ತೀವ್ರ ಕಳವಳ ವ್ಯಕ್ತಪಡಿಸಿದೆ.

ಇತ್ತೀಚೆಗೆ ಉತ್ತರಾಖಂಡದ ಹರಿದ್ವಾರದಲ್ಲಿ ಮುಸ್ಲಿಮರ ಹತ್ಯಾಕಾಂಡಕ್ಕಾಗಿ ಕರೆ ನೀಡಿದ ಬಗ್ಗೆಯೂ OIC ಕಳವಳ ವ್ಯಕ್ತಪಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮ್ ಮಹಿಳೆಯರಿಗೆ ಕಿರುಕುಳ ನೀಡಿದ ಘಟನೆಗಳನ್ನು ಉಲ್ಲೇಖಿಸಿದೆ.

ಈ ಎಲ್ಲಾ ಘಟನೆಗಳನ್ನು ಅಂತಾರಾಷ್ಟ್ರೀಯ ಸಮುದಾಯ ಅದರಲ್ಲೂ ವಿಶೇಷವಾಗಿ ವಿಶ್ವಸಂಸ್ಥೆಯ ಕಾರ್ಯಯೋಜನೆಗಳು ಮತ್ತು ಮಾನವ ಹಕ್ಕುಗಳ ಮಂಡಳಿ (HRC) ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ OIC ಆಗ್ರಹಿಸಿದೆ.

ದೇಶದಲ್ಲಿರುವ ಮುಸ್ಲಿಮರ ಸುರಕ್ಷತೆ, ಭದ್ರತೆ ಮತ್ತು ಮೇಲ್ವಿಚಾರಣೆ ಸಂರಕ್ಷಿಸುವ ಮತ್ತು ಅವರ ವಿರುದ್ಧದ ಹಿಂಸಾಚಾರ, ದ್ವೇಷವನ್ನು ಹರಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ OIC ಭಾರತ ಸರ್ಕಾರವನ್ನು ಒತ್ತಾಯಿಸಿದೆ.

Join Whatsapp
Exit mobile version