ಜೆರುಸಲಂ: ಫೆಲೆಸ್ತೀನ್ ನಾಗರಿಕರ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ದೈನಂದಿನ ಅಮಾನವೀಯ ದಾಳಿಯನ್ನು ಖಂಡಿಸಿರುವ ಇಸ್ಲಾಮಿಕ್ ಸಹಕಾರ ಒಕ್ಕೂಟ- ಒಐಸಿ ಪ್ರಧಾನ ಕಾರ್ಯದರ್ಶಿಯವರು, ಫೆಲೆಸ್ತೀನಿಯರಿಗೆ ಜನರಿಗೆ ಜಾಗತಿಕವಾಗಿ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಜೆನಿನ್ ಕ್ಯಾಂಪ್ ಆರು ಮಂದಿ ಫೆಲೆಸ್ತೀನಿಯರ ಬಲಿದಾನ ಪಡೆದಿದೆ. ನೂರಾರು ಮಂದಿ ಮುಗ್ಧ ಫೆಲೆಸ್ತೀನಿಯರು ಗಾಯಗೊಳ್ಳುವಂತೆ ಮಾಡಿದೆ. ಫೆಲೆಸ್ತೀನ್ ನಗರದ ಹವಾರದಲ್ಲಿ ಬಲವಂತವಾಗಿ ನುಗ್ಗಿರುವ ಇಸ್ರೇಲಿ ಉಗ್ರರ ಬರ್ಬರ ಕೃತ್ಯಗಳು, ನಿರಂತರ ಹಿಂಸೆ, ಗಾಜಾ ಪಟ್ಟಿಯಲ್ಲಿ ನಿಲ್ಲದ ದಾಳಿ, ಮಹಿಳೆಯರು ಮಕ್ಕಳು ಎಲ್ಲರ ಬಲಿ ಪಡೆಯುವ, ಜನ ನೆಲೆಯನ್ನೇ ನಾಶ ಪಡಿಸುವ ಇಸ್ರೇಲಿನ ಕೃತ್ಯಗಳು ಅಂತಾರಾಷ್ಟ್ರೀಯ ಮಾನವೀಯ ಕಾಯ್ದೆಗಳನ್ನೆಲ್ಲ ಧ್ವಂಸ ಮಾಡಿದೆ ಎಂದು ಅವರು ಹೇಳಿದರು.
ಇಸ್ರೇಲ್ ತನ್ನ ಉಗ್ರ ನಡೆಯಿಂದ ಫೆಲೆಸ್ತೀನ್ ಮತ್ತು ಆ ವಲಯದಲ್ಲಿ ನಿತ್ಯ ಉದ್ವಿಗ್ನತೆಯ ವಾತಾವರಣವು ಮುಂದುವರಿಯುವಂತೆ, ಸುತ್ತ ಮುತ್ತ ಅಸುರಕ್ಷಿತ, ಶಿಥಿಲ ವಾತಾವರಣವನ್ನು ಹುಟ್ಟು ಹಾಕಿದೆ ಎಂದು ಅವರು ದೂರಿದ್ದಾರೆ.
ನಿರಂತರವಾದ ಇಸ್ರೇಲಿಯನರ ಅಪರಾಧಗಳನ್ನು ತಡೆಯಲು ಅಂತಾರಾಷ್ಟ್ರೀಯ ಸಾಮಾಜಿಕ ಕಾರ್ಯಕರ್ತರು, ಮಾನವೀಯ ಸಂಘಟನೆಗಳು, ಜಾಗರಿಕ ನಾಯಕರು ಮಧ್ಯ ಪ್ರವೇಶ ಮಾಡಬೇಕು. ಫೆಲೆಸ್ತೀನ್ ಪಟ್ಟಣಗಳಾದ ಅಲ್ ಕೋದ್, ಅಲ್ ಶೆರೀಪ್ ಮೊದಲಾದ ಇಸ್ರೇಲಿ ನೆಲೆಗಳನ್ನು ಬಲಾತ್ಕಾರವಾಗಿ ವಶಪಡಿಸಿಕೊಂಡಿರುವ ಇಸ್ರೇಲ್ ಅಲ್ಲೆಲ್ಲ ಹಿಂಸಾಚಾರವನ್ನೇ ತನ್ನ ವೃತ್ತಿಯಾಗಿಸಿಕೊಂಡಿದೆ. ಫೆಲೆಸ್ತೀನಿಯರಿಗೆ ರಕ್ಷಣೆ ನೀಡುವುದು ನಮ್ಮೆಲ್ಲರ ಜಾಗತಿಕ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.