ಮುಲ್ಕಿ: ಕೊರೊನಾ ಸೋಂಕಿತರ ನೆರವಿಗೆ ಸಜ್ಜಾದ ‘ಮುಲ್ಕಿ ಕೋವಿಡ್ ವಾರಿಯರ್ಸ್’ಗೆ ಚಾಲನೆ

Prasthutha|

ಮುಲ್ಕಿ: ಕೋವಿಡ್ ಕಾಲದಲ್ಲಿ ಅಗತ್ಯ ವೈದ್ಯಕೀಯ ನೆರವಿನೊಂದಿಗೆ ಕಾರ್ಯಚರಿಸುವ ಉದ್ದೇಶದಿಂದ ‘ಮುಲ್ಕಿ ಕೋವಿಡ್ ವಾರಿಯರ್ಸ್’ ತಂಡವನ್ನು ರಚಿಸಿ ಅಧಿಕೃತ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮವನ್ನು ಮುಲ್ಕಿ ನಗರಸಭೆಯ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಪಿ. ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಜಾಗರೂಕರಾಗಿದ್ದು, ಅಗತ್ಯ ಸಮಯದಲ್ಲಿ ಸೇವೆ ನೀಡಲು ಮುಂದಾಗಿರುವ ಕೋವಿಡ್ ವಾರಿಯರ್ಸ್ ನೆರವು ಪಡೆಯಿರಿ ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೆಡಿಕಲ್ ಉಸ್ತುವಾರಿ ಖಾದರ್ ಕಂಕನಾಡಿ, ಇಲ್ಲಿ ದೊರಕುವ ಆಕ್ಸಿಜನ್ ಪೂರೈಕೆ, ಆ್ಯಂಬುಲೆನ್ಸ್ ಸೇವೆ, ಸ್ಯಾನಿಟೈಝೇಷನ್ ಸಹಿತ ಪ್ರತಿಯೊಂದು ಸೇವೆಗಳನ್ನು ಅವಶ್ಯಕತೆ ಇರುವ ಜನರಿಗೆ ತಲುಪಿಸುವ ಕಾರ್ಯಗಳು ಸುಸೂತ್ರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

- Advertisement -

ಈ ಸಂದರ್ಭದಲ್ಲಿ  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮುಲ್ಕಿ ಘಟಕಾಧ್ಯಕ್ಷ ಅಬೂಬಕ್ಕರ್ ಹಾಜಿ, ಮುಲ್ಕಿ ಶಾಫಿ ಜುಮಾ ಮಸೀದಿ ಅಧ್ಯಕ್ಷ ಲಿಯಾಕತ್ ಅಲಿ, ಕೊಲ್ನಾಡು ಜುಮಾ ಮಸೀದಿ ಅಧ್ಯಕ್ಷ ಹನೀಫ್ ಕೊಲ್ನಾಡು,ಎಸ್ಕೆ ಎಸ್ಸೆಮ್ ಮುಲ್ಕಿ ಅಧ್ಯಕ್ಷ ಉಮರ್ ಫಾರೂಕ್, ಕಾರ್ಯದರ್ಶಿ ಮೊಹಮ್ಮದ್ ಕಾರ್ನಾಡು, ಯುನೈಟೆಡ್ ಮುಲ್ಕಿ ಫೌಂಡೇಷನ್ ಜಂಟಿ ಕಾರ್ಯದರ್ಶಿ ಮಹಮ್ಮದ್ ಸಲೀಂ ಮುಲ್ಕಿ, ಸದಸ್ಯ ಅಬೂಬಕ್ಕರ್ ಅಜಿಲಮೊಗರು, ಮುಲ್ಕಿ ಜುಮಾ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಅಬ್ಬಾಸ್ ಅಲಿ ಕಾರ್ನಾಡು, ಎಸ್ಡಿಪಿಐ ಮುಲ್ಕಿ ವಲಯ ಕಾರ್ಯದರ್ಶಿ ಇಬ್ರಾಹಿಂ ಕಾರ್ನಾಡು, ಮುಲ್ಕಿ ನಗರಸಭೆ ಸದಸ್ಯ ಹಾಗೂ ಮುಸ್ಲಿಂ ಯಂಗ್ ಮೆನ್ಸ್ ಕಾರ್ನಾಡು ಅಧ್ಯಕ್ಷ ಹಕೀಂ ಕಾರ್ನಾಡು, ಇಮ್ತಿಯಾಜ್ ಮುಲ್ಕಿ ಮತ್ತು ಹಿಮಾಯತುಲ್ ಇಸ್ಲಾಂ ದಫ್ ಸಮಿತಿ ಕಾರ್ನಾಡು ಅಧ್ಯಕ್ಷ ಎಂ.ಕೆ ಮೊಹಮ್ಮದ್ ಉಪಸ್ಥಿತರಿದ್ದರು.

- Advertisement -