Home ಟಾಪ್ ಸುದ್ದಿಗಳು ಅಧಿಕಾರಿಗಳ ನಿರ್ಲಕ್ಷ್ಯ: ಬಸ್ ರಿಪೇರಿ ವೇಳೆ KSRTC ಮೆಕಾನಿಕ್ ಸಾವು

ಅಧಿಕಾರಿಗಳ ನಿರ್ಲಕ್ಷ್ಯ: ಬಸ್ ರಿಪೇರಿ ವೇಳೆ KSRTC ಮೆಕಾನಿಕ್ ಸಾವು

ಬಳ್ಳಾರಿ: ಬಸ್ ರಿಪೇರಿ ಮಾಡುವ ವೇಳೆ ಮೆಕಾನಿಕ್ ಓರ್ವ ಮೃತಪಟ್ಟ ಘಟನೆ ಕುರುಗೋಡು KSTRC ಡಿಪೋದಲ್ಲಿ ನಡೆದಿದೆ.
KSTRC ಮೆಕಾನಿಕ್ ಟಿ ಮಂಜುನಾಥ ಮೃತಪಟ್ಟವರು ಎಂದು ಗುರುತಿಸಲಾಗಿದೆ.


ಸಾವಿಗೆ ಡಿಪೋ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಮೆಕಾನಿಕ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.


ಬಸ್ ಕೆಳಗಡೆ ತುಂಡಾಗಿದ್ದ ಬುಷ್ ರಾಡ್ ಸರಿಪಡಿಸುವ ವೇಳೆ ಅವಘಡ ಸಂಭವಿಸಿದೆ. ರಾಡ್ ತುಂಡಾಗಿ ಕಾರ್ಮಿಕನ ಗಂಟಲಿಗೆ ಸಿಲುಕಿ ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾನೆ. ಮೃತ ಮಂಜುನಾಥ ಬಾದನಹಟ್ಟಿ ನಿವಾಸಿ. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ರಾಂಪ್ ವ್ಯವಸ್ಥೆ ಕಲ್ಪಿಸದೇ ಮೆಕಾನಿಕ್ ಗೆ ರಿಪೇರಿ ಮಾಡಲು ಹೇಳಿದ್ದರಿಂದ ಈ ದುರಂತ ಸಂಭವಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version