Home ಟಾಪ್ ಸುದ್ದಿಗಳು ಒಡಿಶಾ ರೈಲು ದುರಂತ: ಸುಪ್ರೀಂಕೋರ್ಟ್​​​ಗೆ ಪಿಐಎಲ್​ ಸಲ್ಲಿಕೆ

ಒಡಿಶಾ ರೈಲು ದುರಂತ: ಸುಪ್ರೀಂಕೋರ್ಟ್​​​ಗೆ ಪಿಐಎಲ್​ ಸಲ್ಲಿಕೆ

ಒಡಿಶಾದ ಬಾಲಸೋರ್​ ನಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​​​ ನಲ್ಲಿ ಪಿಐಎಲ್​ ಸಲ್ಲಿಕೆಯಾಗಿದೆ.

ರೈಲ್ವೆ ದುರಂತ ಸಂಬಂಧ ತನಿಖೆಗೆ ತಜ್ಞರ ಸಮಿತಿ ರಚಿಸುವಂತೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಲಾಗಿದೆ. ಸಾರ್ವಜನಿಕರ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಸುಪ್ರೀಂ ಕೋರ್ಟ್ ವಕೀಲ ವಿಶಾಲ್ ತಿವಾರಿ ಅರ್ಜಿ ಸಲ್ಲಿಸಿದ್ದಾರೆ. ರೈಲು ಪ್ರಯಾಣವನ್ನು ಶೇ.100ರಷ್ಟು ಸುರಕ್ಷಿತಗೊಳಿಸಲು ಕೇಂದ್ರ ಸರ್ಕಾರಕ್ಕೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದಾರೆ.

ಒಡಿಶಾ ರೈಲು ಅಪಘಾತದಲ್ಲಿ ಇಲ್ಲಿಯವರೆಗೆ 288 ಜನರು ಸಾವನ್ನಪ್ಪಿದ್ದಾರೆ.

Join Whatsapp
Exit mobile version