Home ಟಾಪ್ ಸುದ್ದಿಗಳು ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣಿನ ಚಿತ್ರಗಳನ್ನು ಎಲ್ಲೆಡೆ ಹಂಚಿಕೊಂಡ ಮಾಲೀಕ, ಮರುದಿನವೇ 2.5 ಲಕ್ಷ...

ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣಿನ ಚಿತ್ರಗಳನ್ನು ಎಲ್ಲೆಡೆ ಹಂಚಿಕೊಂಡ ಮಾಲೀಕ, ಮರುದಿನವೇ 2.5 ಲಕ್ಷ ಮೌಲ್ಯದ ಹಣ್ಣುಗಳು ಕಳವು

ಭುವನೇಶ್ವರ: ಮಾವು ಮಾರಾಟಕ್ಕಿದೆ ಎಂದು ಜಮೀನಿನ ಮಾಲೀಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಣ್ಣಿನ ಫೋಟೊಗಳನ್ನು ಹಾಕಿದ್ದು, ಮರುದಿನವೇ 2.5 ಲಕ್ಷ ರೂಪಾಯಿ ಬೆಲೆಬಾಳುವ ಹಣ್ಣುಗಳ ಕಳ್ಳತನವಾದ ಘಟನೆ ಒಡಿಶಾದ ನುವಾಪಾಡಾ ಜಿಲ್ಲೆಯಲ್ಲಿ ನಡೆದಿದೆ.

ರೈತ ಲಕ್ಷ್ಮೀನಾರಾಯಣ ಎಂಬುವವರು ತಮ್ಮ ಜಮೀನಿನಲ್ಲಿ 38ಕ್ಕೂ ಹೆಚ್ಚು ಬಗೆಯ ಮಾವುಗಳನ್ನು ಬೆಳೆಸಿದ್ದರು. ಮಾವು ಬೆಳೆ ಉತ್ತಮವಾಗಿದೆ ಈ ಬಾರಿ ಒಳ್ಳೆಯ ಲಾಭ ಪಡೆಯಬಹುದು ಎನ್ನುವ ಹಂಬಲದಲ್ಲಿದ್ದರು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹಂಚಿಕೊಂಡಿದ್ದರು.

ಅಷ್ಟೇ ಅಲ್ಲದೆ ಮರದ ಫೋಟೊವನ್ನು ಕೂಡ ಹಾಕಿ ಈ ಮರದ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ ಎಂದೂ ಕೂಡ ಬರೆದಿದ್ದರು. ಇದನ್ನು ನೋಡಿದ ಕಳ್ಳರು ಅದೇ ಮರಗಳಿಂದ ಹಣ್ಣನ್ನು ಕದ್ದಿದ್ದಾರೆ.

ಒಂದೇ ದಿನದಲ್ಲಿ ಜಮೀನಿನಲ್ಲಿದ್ದ ನಾಲ್ಕು ಮರಗಳಲ್ಲಿನ ಹಣ್ಣನ್ನು ಖದೀಮರು ಕದ್ದು ಪರಾರಿಯಾಗಿದ್ದಾರೆ.

Join Whatsapp
Exit mobile version