Home ಟಾಪ್ ಸುದ್ದಿಗಳು ಕ್ರೀಡಾ ಪ್ರಶಸ್ತಿ ಹೆಸರು ಮರು ನಾಮಕರಣದಿಂದ ಹಿಂದೆ ಸರಿದ ಒಡಿಶಾ ಸರಕಾರ

ಕ್ರೀಡಾ ಪ್ರಶಸ್ತಿ ಹೆಸರು ಮರು ನಾಮಕರಣದಿಂದ ಹಿಂದೆ ಸರಿದ ಒಡಿಶಾ ಸರಕಾರ

ಭುವನೇಶ್ವರ: ಬಿಜು ಪಟ್ನಾಯಕ್ ಕ್ರೀಡಾ ಪ್ರಶಸ್ತಿಯ ಹೆಸರನ್ನು ಮರುನಾಮಕರಣ ಮಾಡುವುದಿಲ್ಲ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.

ರಾಜ್ಯದ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಬಿಡುಗಡೆ ಮಾಡಿದ್ದ ಪ್ರಶಸ್ತಿಯ ಮಾರ್ಗಸೂಚಿಗಳಲ್ಲಿ ಪ್ರಶಸ್ತಿಯ ಹೆಸರನ್ನು ‘ರಾಜ್ಯ ಕ್ರೀಡಾ ಸಮ್ಮಾನ್’ ಎಂದು ಮರುನಾಮಕರಣ ಮಾಡಲಾಗಿತ್ತು. ಬಳಿಕ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿತ್ತು.ಪ್ರಶಸ್ತಿಯ ಹೆಸರನ್ನು ಮರುನಾಮಕರಣ ಮಾಡಿದ್ದನ್ನು ವಿರೋಧಿಸಿ ಬಿಜು ಪಟ್ನಾಯಕ್ ಅವರ ಪುತ್ರ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಪಕ್ಷವು ವಾಗ್ದಾಳಿ ನಡೆಸಿತ್ತು.

ಪ್ರಶಸ್ತಿಯ ಹೆಸರು ಮರು ನಾಮಕರಣದಿಂದ ಹಿಂದೆ ಸರಿದ ಬಿಜೆಪಿ ನೇತೃತ್ವದ ಸರಕಾರದ ಸಿಎಂ ಮಾಝಿ, ರಾಜ್ಯ ಮತ್ತು ದೇಶಕ್ಕೆ ಬಿಜು ಪಟ್ನಾಯಕ್ ಅವರ ಕೊಡುಗೆ ಸ್ಮರಣೀಯವಾಗಿದೆ. ನನ್ನ ಸರ್ಕಾರವು ಮಣ್ಣಿನ ಮಕ್ಕಳನ್ನು ಗೌರವಿಸುತ್ತದೆ. ಹಾಗಾಗಿ, ಅವರ ಹೆಸರಿನ ಕ್ರೀಡಾ ಪ್ರಶಸ್ತಿಯ ಶೀರ್ಷಿಕೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಮಾಝಿ ಹೇಳಿದ್ದಾರೆ.

Join Whatsapp
Exit mobile version