ಅಕ್ಟೋಪಸ್ ಗೆ ಇರುವುದು 3 ಹೃದಯಗಳು | ಮೆದುಳುಗಳು ಎಷ್ಟೆಂದು ಗೊತ್ತಾದರೆ ನಿಮಗೆ ಆಶ್ಚರ್ಯವಾಗುವುದು ಖಚಿತ! | ಇಲ್ಲಿದೆ ವಿವರ

Prasthutha|

ಅಕ್ಟೋಪಸ್ ಈಜಿಕೊಂಡು ಹೋಗುವುದಕ್ಕಿಂತ ತೆವಳಿಕೊಂಡು ಹೋಗುವುದೇ ಹೆಚ್ಚು. ಹಲವು ಕಾಲುಗಳಿರುವಂತಹ ಅದರ ದೇಹ ಸಂರಚನೆಯ ಮೂಲಕ ತೆವಳಿಕೊಂಡು ಅದು ಮುಂದಕ್ಕೆ ಚಲಿಸುತ್ತಿರುತ್ತದೆ. ಗೆಡ್ಡೆಯಂತಿರುವ ತಲೆ, ಎಲುಬಿಲ್ಲದ ದೇಹ ಹೊಂದಿರುವ ಅಕ್ಟೋಪಸ್ ಕುರಿತ ಈ ಮಾಹಿತಿ ನಿಮ್ಮನ್ನು ಅಚ್ಚರಿಗೀಡು ಮಾಡದಿರದು.

ಅಕ್ಟೋಪಸ್ ಗೆ ಮೂರು ಹೃದಯ ಮತ್ತು ಒಂಬತ್ತು ಮೆದುಳುಗಳಿರುತ್ತವೆ ಎಂಬುದು ನಿಮಗೆ ಗೊತ್ತಿದೆಯಾ?. ಹೌದು, ಅಕ್ಟೋಪಸ್ ಗೆ ಮೂರು ಹೃದಯ ಮತ್ತು ಒಂಬತ್ತು ಮೆದುಳುಗಳಿರುತ್ತವೆ.

- Advertisement -

ಅಕ್ಟೋಪಸ್ ನ ಎರಡು ಹೃದಯಗಳು ಅದರ ಕಿವಿರುಗಳಿಗೆ ರಕ್ತ ಹರಿಸುವ ಪ್ರಕ್ರಿಯೆ ನಿರ್ವಹಿಸಿದರೆ, ಇನ್ನೊಂದು ಸಂಚಲನ ಪ್ರಕ್ರಿಯೆ ನಿರ್ವಹಿಸುತ್ತದೆ. ಅಕ್ಟೊಪಸ್ ಈಜುವಾಗ, ಅದರ ಹೃದಯ ಬಡಿತ ನಿಲ್ಲುತ್ತದೆ ಮತ್ತು ಅದು ವೇಗವಾಗಿ ಚಲಿಸಲು ಸಹಕರಿಸುತ್ತದೆ.

ಅಕ್ಟೋಪಸ್ ಗೆ 9 ಮೆದುಳುಗಳಿವೆ. ಆದರೆ, ಒಂದು ಮೆದುಳು ದೇಹದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುತ್ತದೆ ಮತ್ತು ನಿರ್ವಹಿಸತ್ತದೆ. ಇನ್ನುಳಿದ ಎಂಟು ಮೆದುಳುಗಳು ಅದರ ಎಂಟು ಕೈಗಳ ಮೂಲದಲ್ಲಿರುತ್ತವೆ. ಯಾವ ಕೈಯಲ್ಲಿ ಯಾವ ಮೆದುಳು ಜೋಡಣೆಯಾಗಿರುತ್ತದೋ, ಅದು ಆ ಕೈಯ ಕಾರ್ಯಗಳನ್ನು ನಿರ್ವಹಿಸುತ್ತದೆ.

- Advertisement -