Home ಟಾಪ್ ಸುದ್ದಿಗಳು ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿರುವ ಬೈಡನ್ ನಿರ್ಧಾರ ಸ್ವಾಗತಿಸಿದ ಒಬಾಮ

ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿರುವ ಬೈಡನ್ ನಿರ್ಧಾರ ಸ್ವಾಗತಿಸಿದ ಒಬಾಮ

ವಾಷಿಂಗ್ಟನ್: ಜೋ ಬೈಡನ್ ಅವರನ್ನು ಅಪ್ರತಿಮ ದೇಶಭಕ್ತ ಎಂದು ಕರೆದಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿರುವ ಬೈಡನ್ ನಿರ್ಧಾರವನ್ನು ಪ್ರಶಂಸಿಸಿದ್ದಾರೆ.


ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಒಬಾಮ, ‘ಅಮೆರಿಕದ ಅಧ್ಯಕ್ಷರಾದ ಪ್ರಮುಖರಲ್ಲಿ ಜೋ ಬೈಡನ್ ಕೂಡ ಒಬ್ಬರು. ಜೊತೆಗೆ ಅವರು ನನ್ನ ಆತ್ಮೀಯ ಸ್ನೇಹಿತ ಕೂಡ ಹೌದು. ಅವರೊಬ್ಬ ಅಪ್ರತಿಮ ದೇಶಭಕ್ತ ಎಂಬುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.


‘ಹದಿನಾರು ವರ್ಷದ ಹಿಂದೆ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಕ್ಕಾಗಿ ಹುಡುಕಾಟ ನಡೆಸುತ್ತಿರುವಾಗ ಸಾರ್ವಜನಿಕ ಜೀವನದಲ್ಲಿ ಬೈಡನ್ ಅವರ ಗಮರ್ನಾಹ ಸೇವೆ ಬಗ್ಗೆ ನನ್ನ ಗಮನ ಸೆಳೆದಿತ್ತು. ಆದರೆ ನನಗೆ ಹೆಚ್ಚು ಮೆಚ್ಚುಗೆಯಾಗಿದ್ದು, ಅವರ ಸಹಾನುಭೂತಿ ಮತ್ತು ಕಷ್ಟಪಟ್ಟು ಗಳಿಸಿದ ಸ್ಥಾನ. ಅಧಿಕಾರ ವಹಿಸಿಕೊಂಡ ನಂತರವೂ ಬೈಡನ್ ಅದನ್ನು ಸಾಬೀತು ಮಾಡಿದ್ದರು’ ಎಂದು ಹೇಳಿದ್ದಾರೆ.

Join Whatsapp
Exit mobile version