ಸುಪ್ರೀಂಕೋರ್ಟ್ ನ 48 ನೇ ಮುಖ್ಯನ್ಯಾಯಮೂರ್ತಿಯಾಗಿ ಎನ್.ವಿ.ರಮಣ ಪ್ರಮಾಣವಚನ ಸ್ವೀಕಾರ

Prasthutha|

ಹೊಸದಿಲ್ಲಿ : ಸುಪ್ರೀಂಕೋರ್ಟ್ ನ 48 ನೇ ಮುಖ್ಯನ್ಯಾಯಮೂರ್ತಿಯಾಗಿ ಎನ್.ವಿ. ರಮಣ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ನೂತನ ಸಿಜೆಐಗೆ ಪ್ರಮಾಣವಚನ ಬೋಧಿಸಿದರು.

- Advertisement -

ನಿರ್ಗಮಿತ ಸಿಜೆಐ ಎಸ್.ಎ. ಬೊಬ್ಡೆ ಅವರ ಉತ್ತರಾಧಿಕಾರಿಯಾಗಿ ಎನ್.ವಿ.ರಮಣ ಅವರು ಇಂದು ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  2022 ರ ಆಗಸ್ಟ್ 26 ರವರೆಗೆ ಅವರ ಸೇವೆ ಮುಂದುವರಿಯಲಿದೆ.





ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂನಲ್ಲಿ ಜನಿಸಿದ 64 ವರ್ಷದ ಎಸ್.ವಿ. ರಮಣ ಅವರು ಮೂಲತಃ ಕೃಷಿ ಕುಟುಂಬದಿಂದ ಬಂದವರಾಗಿದ್ದಾರೆ. ಅವರು 1983 ರಿಂದ ವಕೀಲಿ ವೃತ್ತಿ ಶುರು ಮಾಡಿದ್ದರು. ದೆಹಲಿ ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದ ರಮಣ ಅವರು 2014 ರ ಫೆಬ್ರವರಿ 17 ರಂದು ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

Join Whatsapp