Home ಟಾಪ್ ಸುದ್ದಿಗಳು ಬೆದರಿಕೆಗಳ ಬಗ್ಗೆ ನ್ಯಾಯಾಧೀಶರು ದೂರು ನೀಡಿದಾಗ ತನಿಖಾ ಸಂಸ್ಥೆಗಳು ಪ್ರತಿಕ್ರಿಯಿಸುವುದೇ ಇಲ್ಲ: ನ್ಯಾ. ಎನ್.ವಿ.ರಮಣ ಅಸಮಾಧಾನ

ಬೆದರಿಕೆಗಳ ಬಗ್ಗೆ ನ್ಯಾಯಾಧೀಶರು ದೂರು ನೀಡಿದಾಗ ತನಿಖಾ ಸಂಸ್ಥೆಗಳು ಪ್ರತಿಕ್ರಿಯಿಸುವುದೇ ಇಲ್ಲ: ನ್ಯಾ. ಎನ್.ವಿ.ರಮಣ ಅಸಮಾಧಾನ

ನವದೆಹಲಿ: ನ್ಯಾಯಾಧೀಶರು ತಮಗಿರುವ ಬೆದರಿಕೆಗಳ ಬಗ್ಗೆ ದೂರು ನೀಡಿದಾಗ ತನಿಖಾ ಸಂಸ್ಥೆಗಳು ಪ್ರತಿಕ್ರಿಯಿಸುವುದೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


ಕಳೆದ ವಾರ ಜಾರ್ಖಂಡ್ ನಲ್ಲಿ ನಡೆದ ಜಿಲ್ಲಾ ನ್ಯಾಯಾಧೀಶರ ಹತ್ಯೆ ಪ್ರಕರಣದ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶರು, ಬೆದರಿಕೆಗಳ ಬಗ್ಗೆ ನ್ಯಾಯಾಧೀಶರು ದೂರು ನೀಡಿದಾಗ ತನಿಖಾ ಸಂಸ್ಥೆಗಳು “ಯಾವುದೇ ಸಹಾಯ ಮಾಡುತ್ತಿಲ್ಲ” ಎಂದು ಪ್ರತಿಕ್ರಿಯಿಸಿದರು.


“ಸಿಬಿಐ ತನ್ನ ಧೋರಣೆಯನ್ನು ಬದಲಿಸಿಲ್ಲ. ನ್ಯಾಯಾಧೀಶರು ಸಿಬಿಐ, ಇಂಟೆಲಿಜೆನ್ಸ್ ಬ್ಯೂರೋಗೆ ಬೆದರಿಕೆಗಳ ಬಗ್ಗೆ ದೂರು ನೀಡಿದಾಗ ಅವರು ಪ್ರತಿಕ್ರಿಯಿಸುವುದಿಲ್ಲ. ತನಿಖಾ ಸಂಸ್ಥೆಗಳು ಅವರಿಗೆ ಯಾವುದೇ ಸಹಾಯ ಮಾಡುತ್ತಿಲ್ಲ. ಇದನ್ನು ನಾನು ಸ್ವಲ್ಪ ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ” ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದರು.

Join Whatsapp
Exit mobile version