ಅಸ್ಸಾಂ: ಮಾರುತಿ ಸ್ವಿಫ್ಟ್ ಕಾರನ್ನು ಐಷಾರಾಮಿ ಲಂಬೋರ್ಗಿನಿಯಾಗಿ ಮಾರ್ಪಾಡು ಮಾಡಿ ಅದನ್ನು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ವ್ಯಕ್ತಿಯೊಬ್ಬರು ಉಡುಗೊರೆಯಾಗಿ ನೀಡಿದ್ದಾರೆ.
ಈ ಕಾರನ್ನು ಕರೀಂಗಂಜ್ ಜಿಲ್ಲೆಯ ಮೋಟಾರ್ ಮೆಕ್ಯಾನಿಕ್ ಆಗಿರುವ ನೂರುಲ್ ಹಖ್ ತಯಾರು ಮಾಡಿ ಸಿಎಂ ಗೆ ಗಿಫ್ಟ್ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ನೂರುಲ್ ಹಖ್, ಈ ಹಿಂದೆ ಸ್ಪೋಟ್ಸ್ ಕಾರನ್ನು ರೂಪಿಸಿದ ಅನುಭವವಿತ್ತು. ಲಂಬೋರ್ಗಿನಿ ಕಾರಿನ ತದ್ರೂಪವನ್ನೇ ರೂಪಿಸುವ ಇಚ್ಛೆಯೊಂದಿಗೆ ಯೋಜಿಸಿ 10 ಲಕ್ಷ ರೂಪಾಯಿ ಖರ್ಚು ಮಾಡಿ, ವಿವಿಧ ಬಿಡಿಭಾಗಗಳನ್ನು ಖರೀದಿಸಿ 4 ತಿಂಗಳಲ್ಲಿ ಐಷಾರಾಮಿ ಕಾರಿನಂತೆಯೇ ನಿರ್ಮಾಣ ಮಾಡಿದೆ ಎಂದು ಹೇಳಿದರು.
ಲಂಬೋರ್ಗಿನಿಯಾಗಿ ಮಾರ್ಪಾಡಾದ ಕಾರನ್ನು ಕಂಡು ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮೆಕ್ಯಾನಿಕ್ ನೂರುಲ್ ರಿಂದ ಗುವಾಹಟಿಯಲ್ಲಿ ಕಾರು ಪಡೆದು ಅದರಲ್ಲಿ ಕುಳಿತು ಆನಂದಿಸಿದರು. ಥೇಟ್ ಲಂಬೋರ್ಗಿನಿಯಂತೆಯೇ ಇದು ಕಾಣುತ್ತದೆ ಎಂದು ಕಾರಿನ ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Wrapped up my day at Silchar with a walk from Itkhola to Circuit House along with our karyakartas. Happy to meet a lot of warm-hearted along the way.
— Himanta Biswa Sarma (@himantabiswa) November 29, 2022
Also had the thrill of being at the wheel of a 'Lamborghini' assembled by Nurul Haque, a car enthusiast from Karimganj. pic.twitter.com/7EMsG4MtbT