Home ಜಾಲತಾಣದಿಂದ ರೈಲು ಹತ್ತುವಾಗ ಕೆಳಗೆ ಬಿದ್ದು ನರ್ಸ್ ಕಾಲು ಕಟ್!

ರೈಲು ಹತ್ತುವಾಗ ಕೆಳಗೆ ಬಿದ್ದು ನರ್ಸ್ ಕಾಲು ಕಟ್!

ತಲಶ್ಶೇರಿ: ರೈಲು ಹತ್ತುವಾಗ ಕೆಳಗೆ ಬಿದ್ದ ನರ್ಸ್ ಕಾಲು ತುಂಡಾದ ಘಟನೆ ನಡೆದಿದೆ.

ಪಯ್ಯಾವೂರು ಉಳಿಕ್ಕಲ್ ಕರಪಳಕ್ಕಿಲ್ ಹೌಸ್ ನ ಮಿನಿ ಜೋಸೆಫ್ (47) ಎಂಬವರ ಎಡಗಾಲಿನ ಪಾದ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡು ತುಂಡಾಗಿದೆ.

ಬುಧವಾರ ಬೆಳಗ್ಗೆ 7.15ಕ್ಕೆ ತಲಶ್ಶೇರಿ ನಿಲ್ದಾಣದಲ್ಲಿ ಮುಂಬೈ-ತಿರುವನಂತಪುರಂ ನೇತ್ರಾವತಿ ಎಕ್ಸ್‌ಪ್ರೆಸ್‌ನ ಕಂಪಾರ್ಟ್‌ಮೆಂಟ್ ಬದಲಾಯಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ತಾವು ಕೆಲಸ ಮಾಡುತ್ತಿದ್ದ ತಿರೂರಿನಲ್ಲಿರುವ ಆಸ್ಪತ್ರೆಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದ್ದು, ತನ್ನ ಪತಿ ಮತ್ತು ಮಗಳೊಂದಿಗೆ ಅವರು ಪ್ರಯಾಣಿಸುತ್ತಿದ್ದರು.

ತಕ್ಷಣ ತಲಶ್ಶೇರಿ ಜನರಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.

Join Whatsapp
Exit mobile version