Home ಟಾಪ್ ಸುದ್ದಿಗಳು ನವಜಾತ ಶಿಶುಗಳಿಗೆ ಕೋವಿಡ್ ಲಸಿಕೆ ಕೊಟ್ಟ ನರ್ಸ್: ಮಕ್ಕಳು ಆಸ್ಪತ್ರೆಗೆ ದಾಖಲು

ನವಜಾತ ಶಿಶುಗಳಿಗೆ ಕೋವಿಡ್ ಲಸಿಕೆ ಕೊಟ್ಟ ನರ್ಸ್: ಮಕ್ಕಳು ಆಸ್ಪತ್ರೆಗೆ ದಾಖಲು

ಬ್ರೆಜಿಲಿಯಾ: ಎರಡು ನವಜಾತ ಶಿಶುಗಳಿಗೆ ಆರೋಗ್ಯದಲ್ಲಿ ಏರುಪೇರಾದ ಕಾರಣ ನರ್ಸ್ ವೊಬ್ಬರು ಮಗುವಿಗೆ ರೋಗನಿರೋಧಕ ಲಸಿಕೆ ನೀಡುವ ಬದಲಿಗೆ  ತಪ್ಪಾಗಿ ಕೋವಿಡ್ ವಿರುದ್ಧ ಹೋರಾಡುವ ಫೈಜರ್ ವ್ಯಾಕ್ಸಿನ್ ನೀಡಿರುವ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ.

ಡಿಫ್ತೀರಿಯಾ (ಉಸಿರಾಟದ ಸಮಸ್ಯೆ), ಪೆರ್ಟುಸಿಸ್ (ನಾಯಿ ಕೆಮ್ಮು) ಹಾಗೂ ಹೆಪಟೈಟಿಸ್ ಬಿನಿಂದ ಬಳಲುತ್ತಿದ್ದ ಎರಡು ತಿಂಗಳ ಹೆಣ್ಣು ಮಗು ಮತ್ತು ನಾಲ್ಕು ತಿಂಗಳ ಗಂಡು ಮಗು ಆಸ್ಪತ್ರೆಗೆ ದಾಖಲಾಗಿದ್ದವು.

ಅಧ್ಯಯನದ ಪ್ರಕಾರ ಇದು ಶಿಶುಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಎಡವಟ್ಟು ಮಾಡಿದ ನರ್ಸ್ ಅನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.

Join Whatsapp
Exit mobile version