Home ಟಾಪ್ ಸುದ್ದಿಗಳು ನೂಪುರ್ ಶರ್ಮಾ ಸದ್ಯವೇ ಬಿಜೆಪಿಯ ದೆಹಲಿ ಸಿಎಂ ಅಭ್ಯರ್ಥಿ: ಅಸದುದ್ದೀನ್ ಉವೈಸಿ

ನೂಪುರ್ ಶರ್ಮಾ ಸದ್ಯವೇ ಬಿಜೆಪಿಯ ದೆಹಲಿ ಸಿಎಂ ಅಭ್ಯರ್ಥಿ: ಅಸದುದ್ದೀನ್ ಉವೈಸಿ

ಹೊಸದಿಲ್ಲಿ : ಪ್ರವಾದಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಂಡ ಪಕ್ಷದ ವಕ್ತಾರೆ ನೂಪುರ್ ಶರ್ಮಾ ಮುಂದಿನ ಆರೇಳು ತಿಂಗಳಲ್ಲಿ ಭಾರತೀಯ ಜನತಾ ಪಕ್ಷದ ದೊಡ್ಡ ನಾಯಕಿಯಾಗಲಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥರಾದ ಅಸದುದ್ದೀನ್  ಉವೈಸಿ ಹೇಳಿದ್ದಾರೆ.

ಹೈದರಾಬಾದ್ನಳಲ್ಲಿ ಯುನೈಟೆಡ್ ಆ್ಯಕ್ಷನ್ ಫೋರಂ ವತಿಯಿಂದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ಬಂಧನಕ್ಕೆ ಆಗ್ರಹಿಸಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಮುಸ್ಲಿಮರನ್ನು ನಿಂದಿಸುವವರು ಪಕ್ಷದಲ್ಲಿ ದೊಡ್ಡ ಹುದ್ದೆ ಪಡೆಯುತ್ತಾರೆ. ಆದ್ದರಿಂದ ನೂಪುರ್ ಶರ್ಮಾ ಅವರನ್ನು ದೆಹಲಿ ಸಿಎಂ ಅಭ್ಯರ್ಥಿಯಾಗಿ ಬಿಜೆಪಿ ಮಾಡುವ ಎಲ್ಲ ಸಾಧ್ಯತೆಯೂ ಇದೆ. ಆಕ್ಷೇಪಾರ್ಹ ಹೇಳಿಕೆಗಳಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆಯಷ್ಟೇ. ಪ್ರವಾದಿ ನಿಂದಕರ ವಿರುದ್ಧ ಕ್ರಮ ಕೈಗೊಳ್ಳಲು ಪಕ್ಷ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟರು.

“ಉವೈಸಿಯಿಂದ ಇಸ್ಲಾಂ ಅರ್ಥ ಮಾಡಿಕೊಳ್ಳಬೇಡಿ. ಕುರ್‌ಆನ್ ತೆಗೆದುಕೊಂಡು ಓದಿರಿ. ಬಳಿಕ ನಿಮಗೆ ಇಸ್ಲಾಂ ಮತ್ತು ಪ್ರವಾದಿ ಬಗೆಗಿನ ಪ್ರೀತಿ ಅರ್ಥವಾಗುತ್ತದೆ” ಎನ್ನುತ್ತಾ ಭಾರತೀಯ ಮುಸ್ಲಿಮರನ್ನು ಸ್ವಯಂ- ಆತ್ಮಾವಲೋಕನ ಮಾಡಿಕೊಳ್ಳುವವರು ಎಂದು ಬಣ್ಣಿಸಿದರು.

“ನೂಪುರ್ ಶರ್ಮಾ ವಿರುದ್ಧ ಮೊದಲ ಎಫ್ಐಆರ್ ದಾಖಲಾಗಿರುವುದು ಹೈದರಾಬಾದ್ ನಲ್ಲಿ . ಆದರೆ ಬಿಜೆಪಿ ನೂಪುರ್ ಶರ್ಮಾ ಅವರನ್ನು ರಕ್ಷಿಸುತ್ತಿದೆ. ನಾವು ಪ್ರಧಾನಿಗೆ ಮನವಿ ಮಾಡಿದ್ದೇವೆ. ಆದರೆ ಈ ಬಗ್ಗೆ ಅವರು ಒಂದು ಶಬ್ದವನ್ನೂ ಮಾತನಾಡಿಲ್ಲ. ಇಲ್ಲಿನ ಸಿಎಂ ಹಾಗೂ ಪೊಲೀಸ್ ಮುಖ್ಯಸ್ಥರನ್ನು ಕೇಳುತ್ತಿದ್ದೇನೆ. ದೆಹಲಿಗೆ ಪೊಲೀಸರನ್ನು ಕಳುಹಿಸಿ, ನೂಪುರ್ ಶರ್ಮಾ ಅವರನ್ನು ಕರೆತರುವಂತೆ ಆಗ್ರಹಿಸುತ್ತಿದ್ದೇನೆ ಎಂದು ಉವೈಸಿ ಹೇಳಿರುವುದಾಗಿ ಮಾಧ್ಯಮಗಳು  ವರದಿ ಮಾಡಿದೆ.

Join Whatsapp
Exit mobile version