ಮಹಿಳಾ ದಿನದಂದೇ ನೌದೀಪ್ ಕೌರ್ ಮೇಲಿನ ಹಲ್ಲೆ ABVP ಯವರ ದ್ವೇಷ ಸಂಸ್ಕೃತಿಯನ್ನು ತೋರಿಸುತ್ತಿದೆ : NWF

Prasthutha|

 ಮಹಿಳಾ ದಿನಾಚರಣೆಯಂದು ಡೆಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾದ  ನೌದೀಪ್ ಕೌರ್  ಅವರ ಮೇಲಿನ ಹಲ್ಲೆ ಎಬಿವಿಪಿ ಕಾರ್ಯಕರ್ತರ ಮಹಿಳೆಯರ ಬಗ್ಗೆ ಅಂತರ್ಗತ ದ್ವೇಷವನ್ನು ತೋರಿಸುತ್ತದೆ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ಹೇಳಿದೆ.

- Advertisement -

  ಮಹಿಳೆಯರ ಹಕ್ಕಿನ ಹಾಗೂ ಅವರ ಹೋರಾಟದ ಕುರಿತು ಇವರ ದ್ರಷ್ಟಿಕೋನ ಏನೆಂದು  ಸ್ಪಷ್ಟವಾಗಿದೆ. ಆರ್ ಎಸ್ ಎಸ್  ಮತ್ತು ಅಲ್ಲಿನ ರಾಜ್ಯ ಆಡಳಿತ ವರ್ಗ ಇದಕ್ಕೆ ಮೊದಲು ಇವರ ಮೇಲೆ ದಾಳಿ ನಡೆಸಿ ಬಂಧನಕ್ಕೆ ಒಳಪಡಿಸಿದ್ದರು, ಹಾಗೂ ಇವರನ್ನು  ನಿಂದನೆಗೆ ಗುರಿಯಾಗಿಸಿದ್ದರು.  ಏಕೆಂದರೆ ಇವರು ಕಾರ್ಮಿಕರ ಕಾರ್ಯಕರ್ತೆಯಾಗಿ ಹಾಗೂ ರೈತ  ಆಂದೋಲನದಲ್ಲಿ ಭಾಗಿಯಾಗಿದ್ದರು. ಈಕೆ ಎಲ್ಲಾ  ಸನ್ನಿವೇಶದಲ್ಲಿ ದಲಿತ ಕಾರ್ಮಿಕರ ಹಾಗೂ ಮಹಿಳಾ ಶೋಷಣೆ ಪರವಾಗಿ  ಬಿಜೆಪಿ ಆಡಳಿತದ  ದಬ್ಬಾಳಿಕೆ ಹಾಗೂ ಹಿಂಸೆಯನ್ನು ಧಿಕ್ಕರಿಸಿ ನಿಂತರು. ಮಹಿಳಾ ದಿನಾಚರಣೆಯ ಸಂದರ್ಭ ಆಕೆಯ ಮೇಲೆ ನಡೆದ  ಹಲ್ಲೆಯು  ಬಿಜೆಪಿ ಸರ್ಕಾರ ಮತ್ತು  ಸಂಘಪರಿವಾರದ ವಿರುದ್ಧ ಟೀಕಿಸುವ ಯಾರ ಮೇಲೂ ಎಬಿವಿಪಿ ಬಹಿರಂಗ ಹಿಂಸಾ ಪ್ರವೃತ್ತಿಯಲ್ಲಿ ಕುಖ್ಯಾತಿ ಪಡೆದಿದೆ  ಎಂಬುವುದನ್ನು ಸ್ಪಷ್ಟಪಡಿಸುತ್ತದೆ.

ಯಾವುದೇ ಅಪರಾಧ ಮಾಡದ, ನೌದೀಪ್ ಕೌರ್ ರನ್ನು  ಜೈಲಿಗೆ ಹಾಕಿ ಹಿಂಸಿಸಿದ ಸರಕಾರವು ಈಗ ತನ್ನ ಮತಾಂಧ ಅಂಶಗಳನ್ನು ವಿದ್ಯಾಲಯದ ಆವರಣದಲ್ಲಿ ಪ್ರಚೋದಿಸುವ ಮೂಲಕ ಮತ್ತು ತನ್ನ  ಪೊಲೀಸ್ ಪಡೆಗಳನ್ನು ಮೂಕಪ್ರೇಕ್ಷಕರನ್ನಾಗಿ ಮಾಡುವ ಮೂಲಕ ಆಕೆಯ ವಿರುದ್ಧ ಹಿಂಸಾಚಾರವನ್ನು ನಡೆಸುತ್ತಿರುವುದು ದೌರ್ಜನ್ಯವಾಗಿದೆ. ಒಂದು ಕಡೆ  ಮಹಿಳಾ ದಿನಾಚರಣೆಯ ಶುಭಾಶಯವನ್ನು ನೀಡುವ ಆಡಳಿತ ವರ್ಗ ಇನ್ನೊಂದೆಡೆ ಮಹಿಳೆಯ ಮೇಲೆ ಇಂತಹ ಹಿಂಸಾಚಾರವನ್ನು ನಡೆಸುತ್ತಿರುವ ಸಂಘಟನೆಯ ವಿರುದ್ಧ ಎಲ್ಲಾ ಪ್ರಜ್ಞಾವಂತ ನಾಗರಿಕರು ಮುಂದೆ ಬಂದು ತಮ್ಮ ಆಕ್ರೋಶವನ್ನು    ವ್ಯಕ್ತಪಡಿಸಬೇಕಾಗಿದೆ. ಇಂತಹ  ಎಬಿವಿಪಿ ಗೂಂಡಾಗಳನ್ನು ಬಂಧಿಸಿ  ವಿದ್ಯಾ ಸಂಸ್ಥೆಗಳಲ್ಲಿ ಮಹಿಳೆಯರು  ಘನತೆಯಿಂದ  ಮತ್ತು ಸುರಕ್ಷಿತವಾಗಿ ಓಡಾಡಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ಆಗ್ರಹಿಸಿದೆ.

Join Whatsapp