ಉಡುಪಿ: ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಬಾಲಕಿಯರ ಪರ ಕಾನೂನು ಹೋರಾಟಕ್ಕೆ NSUI ನಿರ್ಧಾರ ಮಾಡಿದೆ.
ಶುಕ್ರವಾರ ಕಾಲೇಜಿಗೆ ಭೇಟಿ ನೀಡಿದ NSUI ನಾಯಕರು , ಈ ಸಂದರ್ಭ ಕೊರೋನಾ ಕಾರಣವೊಡ್ಡಿ ಪ್ರಾಂಶುಪಾಲರ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ ಕಾರಣವನ್ನು ನೀಡಿ ಉಡುಪಿ ಸರ್ಕಾರಿ ಪದವಿ ಕಾಲೇಜ್ ಬಂದ್ ಮಾಡಲಾಗಿದ್ದು, ಆದರೆ ಅಲ್ಲಿಯೇ ಪಕ್ಕದ ಕಂಪೌಂಡ್ ನಲ್ಲಿ ಹೈಸ್ಕೂಲ್ ತರಗತಿ ನಡೆಸುತ್ತಿರುವುದಕ್ಕೆ ನಾಯಕರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅಲ್ಲದೆ, ನ್ಯಾಯಾಲಯದಲ್ಲಿ ವಿದ್ಯಾರ್ಥಿಗಳ ಪರ ರಿಟ್ ಹಾಕಲು ನಿರ್ಧಾರ ಮಾಡಲಾಯಿತು.