Home ಟಾಪ್ ಸುದ್ದಿಗಳು ಲುಲು M A ಯೂಸುಫ್ ಅಲಿಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ | ಪ್ರಾಣಾಪಾಯದಿಂದ ಪಾರು

ಲುಲು M A ಯೂಸುಫ್ ಅಲಿಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ | ಪ್ರಾಣಾಪಾಯದಿಂದ ಪಾರು

ಕೊಚ್ಚಿ : ಲುಲು ಸಮೂಹ ಸಂಸ್ಥೆಗಳ ಉದ್ಯಮಿ ಎಂ ಎ ಯೂಸುಫ್ ಅಲಿಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕೊಚ್ಚಿ ರಾಷ್ಟ್ರೀಯ ಹೆದ್ದಾರಿ ಸಮೀಪದ ಖಾಸಗಿ ಸ್ಥಳದಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಗಿದೆ. ಕೊಚ್ಚಿ ಸಮೀಪದ ಪಣಂಗಾಡ್ ಎಂಬಲ್ಲಿ ಈ ಘಟನೆ ನಡೆದಿದ್ದು, ಯೂಸೂಫ್ ಅಲಿಯವರ ಜೊತೆ ಅವರ ಹೆಂಡತಿ ಕೂಡಾ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಅಲಿಯವರು ತಮ್ಮ ಮನೆಯಿಂದ ಖಾಸಗಿ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಅಲಿ, ಪತ್ನಿ ಮತ್ತು ಪೈಲಟ್ ರನ್ನು ವೈದ್ಯಕೀಯ ತಪಾಸಣೆಗಾಗಿ ಸಮೀಪದ ಕೊಚ್ಚಿ ಆಸ್ಪತ್ರೆಗೆ ದಾಖಲಿಸಲಾಗಿದೆ

Join Whatsapp
Exit mobile version