ಇತ್ತೀಚಿಗೆ ದುಬೈಗೆ ಕೆಲಸಕ್ಕೆಂದು ಆಗಮಿಸಿದ ಗುರಪುರದ ಬಾಂಗ್ಲಾ ಗುಡ್ಡೆ ನಿವಾಸಿ ಅಬ್ದುಲ್ ಲತೀಫ್ ಕಳೆದ 6 ತಿಂಗಳಿನಿಂದ ದುಬೈಯ ರಶೀದಿಯಾದಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಪರೋಟ ಮಾಡುವ ಕೆಲಸದಲ್ಲಿದ್ದರು. ಮೊದಲೇ ತಲೆಯ ರೋಗವೊಂದರ ಸಮಸ್ಯೆ ಇದ್ದ ಇವರಿಗೆ ಕೆಲವೊಮ್ಮೆ ಕೆಲಸದ ಸಮಯದಲ್ಲಿ ತಲೆ ತಿರುಗಿ ಬೀಳುತಿದ್ದರು. ಈ ಕಾರಣ ಕೆಲವೊಮ್ಮೆ ಕೆಲಸಕ್ಕೆ ಹೋಗದೆ ರೂಮಲ್ಲಿ ಇರುತಿದ್ದರು. ಆದರೆ ಮಾಲೀಕ ಅವರ ರೋಗದ ಸಮಸ್ಯೆಯನ್ನು ಅರಿತು ಅವರಿಗೆ ಬೇಕಾದ ಮದ್ದು ಅಥವಾ ಅವರಿಗೆ ಶುಶ್ರೂಷೆ ನೀಡುವ ಬದಲು ಕೆಲಸದಿಂದ ವಜಾ ಮಾಡಿದ್ದರು. ಆದರೆ ಅವರಪಾಸ್ ಪೋರ್ಟ್ ಹಾಗೂ ಎಮಿರೆಟ್ಸ್ ಐಡಿ (ಕೆಲಸದ ಗುರುತು ಕಾರ್ಡ್ ) ಕೊಡದೆ ಸತಾಯಿಸಿದ್ದರು.
ಸುದ್ಧಿ ತಿಳಿದ ತಕ್ಷಣ ಅನಿವಾಸಿ ಕನ್ನಡಿಗರ ಒಕ್ಕೂಟ ಯು. ಎ. ಈ ಇದರ ರಿಯಾಜ್ ಜೋಕಟ್ಟೆ ಅವರು ಲತೀಫ್ ರನ್ನು ಭೇಟಿಯಾಗಿ ಸಮಸ್ಯೆಯನ್ನು ಅರಿತು ದುಬೈ ಸರಕಾರದ ಕಾರ್ಮಿಕ ಕಚೇರಿಗೆ ದೂರು ನೀಡಿದ್ದರು. ದೂರಿನ ಪರಿಸ್ಥಿತಿಯನ್ನು ಗಣನೆಗೆ ತೆಗೆದ ಕಾರ್ಮಿಕ ಕಚೇರಿಯು, ದುಬೈ ಹೋಟೆಲ್ ಮಾಲಕರಿಗೆ ಖಡಕ್ ಸಂದೇಶ ಕೊಟ್ಟು ಲತೀಫ್ ರವರಿಗೆ ಪುನಃ ಉದ್ಯೋಗದಲ್ಲಿ ಖಾಯಂ ಆಗಿ ಮುಂದುವರಿಯಲು ಅವಕಾಶ ಸಿಕ್ಕಿರುತ್ತದೆ. ಇಷ್ಟೇ ಅಲ್ಲದೆ ಊಟ ವಸತಿಯನ್ನು ಹಾಗೂ ಇನ್ನಿತರ ಸೌಕರ್ಯವನ್ನು ನೀಡಿ ಲತೀಫರ ಸಮಸ್ಯೆಯನ್ನು ನೀಗಿಸುವು ದರ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಲತೀಫ್ ರವರು ಕೊಠಡಿ ಇಲ್ಲದೆ ಮರದ ಅಡಿಯಲ್ಲಿ ಮಲಗುತಿದ್ದರು ಎನ್ನಲಾಗಿದೆ.
ಇಂತಹ ಹಲವಾರು ಸಮಸ್ಯೆಗಳನ್ನು ಕನ್ನಡಡಿಗರು ಎದುರಿಸುವುದು, ಕಂಡು ಬರುತ್ತಿದೆ. ಯು ಎ ಈ ರಾಷ್ಟ್ರದಲ್ಲಿ ಅನಿವಾಸಿ ಕನ್ನಡಿಗರ ಒಕ್ಕೂಟ ಇಂತಹ ಹಲವಾರು ಸಮಸ್ಯೆಗಳನ್ನು ಬಗೆಹರಿಸಿದೆ. ಇವರ ಸೇವೆ ನಿಜಕ್ಕೂ ಶ್ಲಾಘನಿಯವಾಗಿದೆ. ನೌಫಲ್ ಕುಕ್ಕಾಜೆ ಹಾಗೂ ಆರಿಸ್ ಬಂಟ್ವಾಳ ಅವರು ಈ ಸೇವಾ ಕಾರ್ಯದ ಮುಂಚೂಣಿಯಲ್ಲಿದ್ದರು.