ಕಾಂಗ್ರೆಸ್ ಬೀದಿ ಜಗಳ | ಈಗ ಚಿದಂಬರಂ ಸರದಿ | ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆಗೆ ಕಳವಳ

Prasthutha|

ನವದೆಹಲಿ : ಬಿಹಾರ ವಿಧಾನಸಭಾ ಚುನಾವಣೆ ಮತ್ತು ಉಪ ಚುನಾವಣೆಗಳ ಫಲಿತಾಂಶದ ಬಳಿಕ ಕಾಂಗ್ರೆಸ್ ನೊಳಗಿನ ಭಿನ್ನಮತ ಬೀದಿಗೆ ಬಂದಿದೆ. ಒಬ್ಬೊಬ್ಬರೇ ನಾಯಕರು ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸುತ್ತಿರುವ ನಡುವೆ, ಇದೀಗ ಹಿರಿಯ ನಾಯಕ ಪಿ.ಚಿದಂಬರಂ ಕೂಡ ತಮ್ಮದೊಂದು ಇರಲಿ ಎಂದು ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

ಬಿಹಾರ ಚುನಾವಣೆ ಮತ್ತು ಉಪ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ತಳಮಟ್ಟದಲ್ಲಿ ಸಂಘಟನಾತ್ಮಕ ಅಸ್ತಿತ್ವ ಹೊಂದಿಲ್ಲ, ಅಥವಾ ಗಣನೀಯವಾಗಿ ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತದೆ ಎಮದು ಚಿದಂಬರಂ ಹೇಳಿದ್ದಾರೆ.

- Advertisement -

“ನಾನು ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕದ ಉಪ ಚುನಾವಣೆ ಬಗ್ಗೆ ಹೆಚ್ಚು ಕಳವಳ ಹೊಂದಿದ್ದೇನೆ. ಈ ಫಲಿತಾಂಶ ಏನು ತೋರಿಸುತ್ತದೆ ಎಂದರೆ, ತಳಮಟ್ಟದಲ್ಲಿ ಪಕ್ಷಕ್ಕೆ ಸಂಘಟನಾತ್ಮಕ ಅಸ್ತಿತ್ವ ಇಲ್ಲ ಅಥವಾ ಗಣನೀಯವಾಗಿ ದುರ್ಬಲವಾಗಿದೆ’’ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಚಿದಂಬರಂ ಹೇಳಿದ್ದಾರೆ.

- Advertisement -