Home ಟಾಪ್ ಸುದ್ದಿಗಳು ಈಗ ವಾಟ್ಸ್ ಆ್ಯಪ್ ಗ್ರೂಪ್ ಗೆ 512 ಜನರನ್ನು ಸೇರಿಸಬಹುದು !

ಈಗ ವಾಟ್ಸ್ ಆ್ಯಪ್ ಗ್ರೂಪ್ ಗೆ 512 ಜನರನ್ನು ಸೇರಿಸಬಹುದು !

ಹೊಸದಿಲ್ಲಿ: ವ್ಯಾಟ್ಸ್ ಆ್ಯಪ್ ಗ್ರಾಹಕರಿಗೆ ನೂತನ ಸೌಲಭ್ಯ ನೀಡಿದ್ದು, ಇದುವರೆಗೆ ವಾಟ್ಸ್ಆ್ಯಪ್ ಗ್ರೂಪ್ ನಲ್ಲಿ ಗರಿಷ್ಠ 256 ಜನರನ್ನು ಸೇರಿಸಲು ಮಾತ್ರವೇ ಅವಕಾಶವಿತ್ತು . ಆದರೆ, ಈಗ ಗ್ರೂಪ್ ಸದಸ್ಯರ ಗರಿಷ್ಠ ಸಂಖ್ಯೆಯನ್ನು 512 ಕ್ಕೆ ಏರಿಕೆ ಮಾಡಿದೆ.

ಈಗಾಗಲೇ , ಕೆಲವು ರಾಷ್ಟ್ರಗಳಲ್ಲಿನ ಒಂದಷ್ಟು ಗ್ರಾಹಕರಿಗೆ 512 ಸದಸ್ಯರನ್ನು ಸೇರಿಸುವ ಸೌಲಭ್ಯ ಹೊಂದಿದ್ದರೆ, ಈ ಸೌಲಭ್ಯ ಇನ್ನೂ ಸಿಗದವರು 24 ಗಂಟೆಗಳು ಪ್ರಮುಖ ಅಪ್ಡೇಟ್ ಗಾಗಿ ಕಾಯಬೇಕಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಎಲ್ಲರಿಗೂ ಹೊಸ ಸೌಲಭ್ಯ ಲಭ್ಯವಾಗಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುವುದರಿಂದ ಒಂದಷ್ಟು ಜನರಿಗೆ ಹೊಸ ಫೀಚರ್ ಸಿಗುತ್ತಿಲ್ಲ ಎಂಬುದು ಸಂಸ್ಥೆ ಸ್ಪಷ್ಟನೆ ನೀಡಿದೆ.

Join Whatsapp
Exit mobile version