Home ಟಾಪ್ ಸುದ್ದಿಗಳು ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೈದು ಪರಾರಿಯಾಗಿದ್ದ ಕುಖ್ಯಾತ ರೌಡಿಗೆ ಗುಂಡಿಕ್ಕಿ ಸೆರೆ

ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೈದು ಪರಾರಿಯಾಗಿದ್ದ ಕುಖ್ಯಾತ ರೌಡಿಗೆ ಗುಂಡಿಕ್ಕಿ ಸೆರೆ

ಬೆಳಗಾವಿ: ರಿಯಲ್ ಎಸ್ಟೇಟ್ ಉದ್ಯಮಿ ದೊಡ್ಡಬೊಮ್ಮನ್ನವರ್ ಎಂಬವರನ್ನು ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದ ಕುಖ್ಯಾತ ರೌಡಿಯನ್ನು ಬೆಳಗಾವಿ ನಗರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಪೊಲೀಸರ ಗುಂಡೇಟು ತಗುಲಿ ಗಾಯಗೊಂಡಿರುವ ರೌಡಿ ವಿಶಾಲ್ ಸಿಂಗ್ ಗೆ ಚೌಹಾಣ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮಂಡೋಳಿ ಗ್ರಾಮದ ರಸ್ತೆ ಕಳೆದ ಮಾರ್ಚ್ 15ರಂದು ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

ರಾಜು ಕೊಲೆಯಲ್ಲಿ ಈಗಾಗಲೇ ನಾಲ್ಕೈದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರು ನೀಡಿದ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಮಾರ್ಕೆಟ್ ಎಸಿಪಿ ನಾರಾಯಣ ಭರಮನಿ ನೇತೃತ್ವದ ಪೊಲೀಸ್ ಸಿಬ್ಬಂದಿಯು ಇಂದು ಬೆಳಗಿನ ಜಾವ 3.30ಕ್ಕೆ ಕೊಲೆಯ ಪ್ರಮುಖ ಆರೋಪಿ ವಿಶಾಲ್ ಸಿಂಗ್ ಚೌಹಾಣ್  ವೀರಭದ್ರೇಶ್ವರ ನಗರದ ಕೋಯ್ಲಾ ಹೋಟೆಲ್ ಬಳಿ ಇರುವ ಬಗ್ಗೆ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆಗೆ ಇಳಿದಿದೆ.

ಪೊಲೀಸರನ್ನು ತಪ್ಪಿಸಿಕೊಳ್ಳಲು  ಎಸಿಪಿ ಮತ್ತವರ ತಂಡದ ಮೇಲೆ ಮಾರಕಾಸ್ತ್ರಗಳಿಂದ ಆರೋಪಿ ಹಲ್ಲೆಗೆ ಮುಂದಾಗಿದ್ದಾನೆ.

ಪ್ರಾಣ ರಕ್ಷಣೆಗಾಗಿ  ಎಸಿಪಿ ನಾರಾಯಣ ಭರಮನಿ ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ವಿಶಾಲ್ ಸಿಂಗ್ ಕಾಲಿಗೆ ಗುಂಡು ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ.

ಆತನನ್ನು ಬಂಧಿಸಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭರಮನಿ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಹತ್ಯೆ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ವಿಶಾಲ್ಸಿಂಗ್ ಚೌಹಾಣ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಈತ ಕೊಲೆ, ಸುಲಿಗೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಆರೋಪಿ ಪತ್ತೆಗೆ ಮೂರು ತಂಡ ಮಾಡಿಕೊಂಡು ಪೊಲೀಸರು ಬಲೆ ಬೀಸಿದ್ದರು.

ಎಸಿಪಿ ನಾರಾಯಣ ಭರಮಣಿ, ಇಬ್ಬರು ಸಿಪಿಐ, ಒಬ್ಬ ಪಿಎಸ್ ಐ ತಂಡದಿಂದ ಕಾರ್ಯಾಚರಣೆ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ವೀರಭದ್ರ ನಗರದ ಕೋಯ್ಲಾ ಹೋಟೆಲ್ ಬಳಿ ಪೊಲೀಸರು ತೆರಳಿದ್ದರು.

ಈ ವೇಳೆ ರೌಡಿ ವಿಶಾಲ್ ಸಿಂಗ್ ಬಂಧಿಸುವ ವೇಳೆ ಸಿಸಿಬಿ ಪೊಲೀಸ್ ಪೇದೆ ಯಾಸೀನ್ ನದಾಫ್ ಎಡಗೈಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಆರೋಪಿ ಪರಾರಿಗೆ ಯತ್ನಿಸಿದ್ದನು. ಆರೋಪಿ ವಿಶಾಲ್ ಸಿಂಗ್ ಮೇಲೆ ಕರ್ನಾಟಕ ಮಹಾರಾಷ್ಟ್ರದಲ್ಲಿ 10ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಕಳೆದ ಮೂರು ತಿಂಗಳಿಂದ ವಿಶಾಲ್ ಸಿಂಗ್ ತಲೆಮರೆಸಿಕೊಂಡಿದ್ದನು.

Join Whatsapp
Exit mobile version