Home ಟಾಪ್ ಸುದ್ದಿಗಳು ಗೋಸ್ವಾಮಿ, ಕಂಗನಾ ವಿರುದ್ಧದ ಹಕ್ಕುಚ್ಯುತಿ ವರದಿ ಸಲ್ಲಿಸಲು ಕಾಲಾವಕಾಶ ವಿಸ್ತರಣೆ

ಗೋಸ್ವಾಮಿ, ಕಂಗನಾ ವಿರುದ್ಧದ ಹಕ್ಕುಚ್ಯುತಿ ವರದಿ ಸಲ್ಲಿಸಲು ಕಾಲಾವಕಾಶ ವಿಸ್ತರಣೆ

ಮುಂಬೈ : ಬಿಜೆಪಿ ಬೆಂಬಲಿಗ ಪತ್ರಕರ್ತ, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ನಟಿ ಕಂಗನಾ ರಣಾವತ್ ವಿರುದ್ಧ ಮಂಡನೆಯಾಗಿರುವ ಹಕ್ಕುಚ್ಯುತಿ ನೋಟಿಸ್ ಗೆ ಸಂಬಂಧಿಸಿ ಮಹಾರಾಷ್ಟ್ರ ವಿಧಾನಸಭೆಯ ಹಕ್ಕುಚ್ಯುತಿ ಸಮಿತಿಗೆ ತನ್ನ ವರದಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಲಾಗಿದೆ. ಮುಂದಿನ ವಿಧಾನಸಭಾ ಅಧಿವೇಶನದ ಕೊನೆಯ ದಿನದ ವರೆಗೂ ವರದಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಶಿವಸೇನೆ ಶಾಸಕ ಪ್ರತಾಪ್ ಸರ್ನಾಯ್ಕ್ ಸೆ.7ರಂದು ಗೋಸ್ವಾಮಿ ಮತ್ತು ಕಂಗನಾ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದರು. ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ನಟಿ ಕಂಗನಾ ವಿರುದ್ಧ ಹಕ್ಕು ಚ್ಯುತಿ ಮಂಡಿಸಲಾಗಿದೆ. ಗೋಸ್ವಾಮಿಯ 2018ರ ಆತ್ಮಹತ್ಯೆ ಪ್ರಚೋದನೆ ಪ್ರಕರಣವನ್ನು ಮರು ತನಿಖೆಗೊಳಪಡಿಸುವಂತೆ ಸರ್ನಾಯ್ಕ್ ಒತ್ತಾಯಿಸಿದ್ದರು.

ನೋಟಿಸ್ ಅನ್ನು ಸ್ವೀಕರಿಸಲಾಗಿದ್ದು, ಅದರ ಪರಿಶೀಲನೆಗೆ ಸಮಿತಿಗೆ ಒಪ್ಪಿಸಲಾಗಿದೆ. ಬಿಜೆಪಿ ಶಾಸಕರುಗಳು ಹಕ್ಕು ಚ್ಯುತಿ ನೋಟಿಸ್ ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಶಿವಸೇನೆ ಶಾಸಕರುಗಳು ಹಕ್ಕುಚ್ಯುತಿ ನೋಟಿಸ್ ಬೆಂಬಲಿಸಿದ್ದಾರೆ.  

Join Whatsapp
Exit mobile version