Home ಟಾಪ್ ಸುದ್ದಿಗಳು ಮುಸ್ಲಿಮರ ಹತ್ಯೆಗಳ ಚಿತ್ರ ನಿರ್ಮಾಣವಾಗಲಿ ಎಂದಿದ್ದ ಐಎಎಸ್‌ ಅಧಿಕಾರಿಗೆ ನೋಟಿಸ್ ಜಾರಿ ಮಾಡಲು ಮಧ್ಯಪ್ರದೇಶ ಸರಕಾರ...

ಮುಸ್ಲಿಮರ ಹತ್ಯೆಗಳ ಚಿತ್ರ ನಿರ್ಮಾಣವಾಗಲಿ ಎಂದಿದ್ದ ಐಎಎಸ್‌ ಅಧಿಕಾರಿಗೆ ನೋಟಿಸ್ ಜಾರಿ ಮಾಡಲು ಮಧ್ಯಪ್ರದೇಶ ಸರಕಾರ ಆದೇಶ !

ಮಧ್ಯಪ್ರದೇಶ: ವಿವಾದಿತ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿ ಮುಸ್ಲಿಮರ ಹತ್ಯೆಗಳ ಕುರಿತಾದ ಸಿನೆಮಾ ನಿರ್ಮಾಣವಾಗಲಿ ಎಂದಿದ್ದ ಐಎಎಸ್‌ ಅಧಿಕಾರಿಗೆ ನೋಟಿಸ್‌ ಜಾರಿ ಮಾಡಲು ಮಧ್ಯಪ್ರದೇಶ ಸರಕಾರ ಆದೇಶಿಸಿದೆ.

ರಾಜ್ಯ ಲೋಕೋಪಯೋಗಿ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿರುವ ಐಎಎಸ್‌ ಅಧಿಕಾರಿ ನಿಯಾಜ್‌ ಖಾನ್‌ ಅವರು ಇತ್ತೀಚೆಗೆ ʼದಿ ಕಾಶ್ಮೀರ್‌ ಫೈಲ್ಸ್‌ʼ ಬಗ್ಗೆ ಪ್ರತಿಕ್ರಿಯಿಸಿ . ಕಾಶ್ಮೀರ್‌ ಫೈಲ್ಸ್ ನಂತೆಯೇ, ದೇಶದ ಅನೇಕ ರಾಜ್ಯಗಳಲ್ಲಿ ಅಪಾರ ಸಂಖ್ಯೆಯಲ್ಲಿ ಮುಸ್ಲಿಮರ ಹತ್ಯೆಯಾಗಿರುವ ಕುರಿತು ಸಿನಿಮಾ ನಿರ್ಮಿಸಬೇಕು. ಮುಸ್ಲಿಂ ಸಮುದಾಯದವರು ಕೀಟಗಳಲ್ಲ. ಅವರು ಸಹ ಈ ದೇಶದ ನಾಗರಿಕರು ಎಂದು ಟ್ವೀಟ್ ಮೂಲಕ ಹೇಳಿದ್ದರು.

ಇದೀಗ ಟ್ವೀಟ್ ಅನ್ನೇ ನೆಪವಾಗಿರಿಸಿರುವ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ, ನಿಯಾಜ್‌ ಖಾನ್‌ ಅವರ ಟ್ವೀಟ್‌ಗಳನ್ನು ಗಮನಿಸಿದ್ದೇವೆ, ಇದು ಗಂಭೀರ ವಿಷಯವಾಗಿದೆ. ಅವರು ಸರ್ಕಾರಿ ಅಧಿಕಾರಿಗಳಿಗೆ ನಿಗದಿಪಡಿಸಿದ ಮಿತಿಯನ್ನು ದಾಟಿ ನಿಯಮ ಉಲ್ಲಂಘಿಸುತ್ತಿದ್ದಾರೆ.ಹೀಗಾಗಿ ಅವರಿಗೆ ಶೋಕಾಸ್ ನೋಟೀಸು ಜಾರಿಗೊಳಿಸಲಿದ್ದೇವೆ ಎಂದು ತಿಳಿಸಿದ್ದಾರೆ.

Join Whatsapp
Exit mobile version