Home ಟಾಪ್ ಸುದ್ದಿಗಳು ಬಹಿರಂಗ ಹೇಳಿಕೆ ನೀಡಿದರೆ ನೋಟಿಸ್ ನೀಡಲಾಗುತ್ತದೆ: ಕೊನೆಯ ಎಚ್ಚರಿಕೆ ನೀಡಿದ ಡಿಕೆಶಿ

ಬಹಿರಂಗ ಹೇಳಿಕೆ ನೀಡಿದರೆ ನೋಟಿಸ್ ನೀಡಲಾಗುತ್ತದೆ: ಕೊನೆಯ ಎಚ್ಚರಿಕೆ ನೀಡಿದ ಡಿಕೆಶಿ

ಬೆಂಗಳೂರು : ಕಾಂಗ್ರೆಸ್ ಪಕ್ಷದ ಕುರಿತು ಇತ್ತೀಚಿಗೆ ಕೈ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದು, ಉಪ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಕೊನೆಯ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಅವರು ಬಹಿರಂಗವಾಗಿ ಯಾವುದೇ ರೀತಿಯಾಗಿ ಹೇಳಿಕೆ ನೀಡಬಾರದು ಎಂದು ಶಾಸಕರಿಗೆ ಎಚ್ಚರಿಕೆ ಕೊಟ್ಟಿದ್ದರು. ಆದರೂ ಇದಕ್ಕೆ ಕಡಿವಾಣ ಬಿದ್ದಿರಲಿಲ್ಲ. ಗರಂ ಆದ ಡಿಕೆ ಶಿವಕುಮಾರ್, ಇದೀಗ ನಿಮಗೆಲ್ಲ ಮತ್ತೊಮ್ಮೆ ಹಾಗೂ ಕೊನೆಯ ಎಚ್ಚರಿಕೆಯನ್ನು ನೀಡುತ್ತಿದ್ದು, ಪಕ್ಷದ ಕುರಿತಾಗಿ ಬಹಿರಂಗ ಹೇಳಿಕೆ ನೀಡಿದವರಿಗೆ ಪಕ್ಷದಿಂದ ನೋಟಿಸ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ದೇವನಹಳ್ಳಿಯ ಬಳಿಯ ಇರುವ ಅಂತಾರಾಷ್ಟ್ರೀಯ ವಿಮಾನದಲ್ಲಿ ನಿಲ್ದಾಣದಲ್ಲಿ ಮಾತನಾಡಿದ ಅವರು, ಪಕ್ಷದ ವಿಚಾರ-ಅಧಿಕಾರದ ವಿಚಾರವಾಗಿ ಇನ್ನು ಮುಂದೆ ಯಾರೂ ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿದ್ದಾರೆ.

ಪಕ್ಷದ ಶಾಸಕರು ಯಾರು ಕೂಡ ಬಹಿರಂಗವಾಗಿ ಹೇಳಿಕೆಯನ್ನು ನೀಡಬಾರದು. ಪಕ್ಷದ ಅಧ್ಯಕ್ಷನಾಗಿ ಇದು ನನ್ನ ಕೊನೆಯ ಎಚ್ಚರಿಕೆ ನೀಡುತ್ತಿದ್ದೇನೆ. ಮತ್ತೆ ಬಹಿರಂಗ ಹೇಳಿಕೆ ಯಾರಾದರೂ ನೀಡಿದರೆ ಪಕ್ಷದಿಂದ ನೋಟಿಸ್ ನೀಡಲಾಗುತ್ತದೆ. ಏನೇ ಸಮಸ್ಯೆ ವಿಚಾರ ಇದ್ದರೂ ಪಕ್ಷದ ನಾಯಕರ ಜೊತೆ ಚರ್ಚಿಸಬೇಕು ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಹೇಳಿದರು.

Join Whatsapp
Exit mobile version