ಮಲಪ್ಪುರಂ: ಚೆಲಾರಿಯಲ್ಲಿ ನಡೆದ ಎನ್‌ಐಎ ದಾಳಿಗೆ ಪಾಪ್ಯುಲರ್ ಫ್ರಂಟ್‌ನೊಂದಿಗೆ ಯಾವುದೇ ಸಂಬಂಧವಿಲ್ಲದ ಕಾರಣ, ಸಂಘಟನೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ವರದಿ ಮಾಡುವುದರಿಂದ ಮಾಧ್ಯಮಗಳು ಹಿಂದೆ ಸರಿಯುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಲಪ್ಪುರಂ ಪೂರ್ವ ಜಿಲ್ಲಾಧ್ಯಕ್ಷ ಪಿ ಅಬ್ದುಲ್ ಅಝೀಝ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಚೆಲಾರಿ ಏರಿಯಾ ಕಾರ್ಯದರ್ಶಿ ಹನೀಫಾ ಹಾಜಿ ಅವರ ಅಳಿಯನ ಪ್ರಕರಣದ ತನಿಖೆಯ ಭಾಗವಾಗಿ ಹನೀಫಾ ಹಾಜಿ ಅವರ ಮನೆಯ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
“ಹನೀಫಾ ಹಾಜಿಯ ಅಳಿಯ ರಾಹುಲ್ ಅಬ್ದುಲ್ಲಾ ಅವರಿಗೆ ಸಂಘಟನೆಯೊಂದಿಗೆ ಯಾವುದೇ ಸಂಬಂಧವಿಲ್ಲದ ಕಾರಣ ಪಾಪ್ಯುಲರ್ ಫ್ರಂಟ್ ಅನ್ನು ಈ ಪ್ರಕರಣಕ್ಕೆ ಎಳೆದು ತರುವುದು ಕೆಟ್ಟ ಉದ್ದೇಶವಾಗಿದೆ. ರಾಜಕೀಯ ವಿರೋಧಿಗಳನ್ನು ಬಲೆಗೆ ಬೀಳಿಸುವ ಏಜೆನ್ಸಿಯಾಗಿ ಎನ್ಐಎ ಮಾರ್ಪಟ್ಟಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ದಾಳಿಯ ಕಾರಣವನ್ನು ಬಹಿರಂಗಪಡಿಸದೆ ಎನ್ಐಎ ಮೌನವಹಿಸುತ್ತಿರುವಾಗ ಕೆಲವು ಮಾಧ್ಯಮಗಳು ಸಂಘಟನೆಯನ್ನು ಭಯೋತ್ಪಾದಕರೆಂದು ಬಿಂಬಿಸುವುದರ ಹಿಂದೆ ಪೊಲೀಸರು ಮತ್ತು ಮಾಧ್ಯಮಗಳ ವಿಶೇಷ ಆಸಕ್ತಿ ಈಗ ಬಹಿರಂಗಗೊಂಡಿದೆ. ಜನರು ಸತ್ಯವನ್ನು ಅರ್ಥಮಾಡಿಕೊಳ್ಳಲು ಸಿದ್ಧರಾಗಿರಬೇಕು ಮತ್ತು ಕೆಲವು ಮಾಧ್ಯಮಗಳ ಸುಳ್ಳು ಪ್ರಚಾರವನ್ನು ನಂಬಬಾರದು” ಎಂದು ಅವರು ಆಗ್ರಹಿಸಿದ್ದಾರೆ.