Home ಟಾಪ್ ಸುದ್ದಿಗಳು ಯಾವುದನ್ನೂ ಕೂಡ ಉಚಿತವಾಗಿ ಕೊಡಬಾರದು: ನಾರಾಯಣ ಮೂರ್ತಿ

ಯಾವುದನ್ನೂ ಕೂಡ ಉಚಿತವಾಗಿ ಕೊಡಬಾರದು: ನಾರಾಯಣ ಮೂರ್ತಿ

ಬೆಂಗಳೂರು: ಯಾವುದನ್ನೂ ಕೂಡ ಉಚಿತವಾಗಿ ಕೊಡಬಾರದು. ಉಚಿತವಾಗಿ ಕೊಟ್ಟರೂ ಜೊತೆಯಲ್ಲಿ ಹೊಣೆಗಾರಿಕೆಯನ್ನೂ ಕೊಡಬೇಕು ಎಂದು ಇನ್ಫೋಸಿಸ್ ಸಹಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ.


ಯುವ ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಇತ್ತೀಚೆಗೆ ವಿವಾದಾಸ್ಪದ ಸಲಹೆ ನೀಡಿದ್ದ ಅವರು ಇದೀಗ ಸಬ್ಸಿಡಿ ನೀಡುವ ಸರ್ಕಾರದ ಕ್ರಮಗಳನ್ನು ವಿರೋಧಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.


‘ಯಾವುದನ್ನೂ ಉಚಿತವಾಗಿ ಕೊಡಬಾರದು. ಸಬ್ಸಿಡಿ ಪಡೆಯುವ ವ್ಯಕ್ತಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ಮುಂದಿನ ತಲೆಮಾರಿಗೆ ಉತ್ತಮ ಭವಿಷ್ಯ ರೂಪಿಸುವ ಕೆಲಸಕ್ಕೆ ಬದ್ಧರಾಗಿರಬೇಕು,’ ಎಂದು ಹೇಳಿದ್ದಾರೆ.

Join Whatsapp
Exit mobile version