Home ಟಾಪ್ ಸುದ್ದಿಗಳು ಮೋದಿ ಸರ್ಕಾರದಿಂದ ಜಮ್ಮು–ಕಾಶ್ಮೀರದಲ್ಲಿ ಯಾವ ಬದಲಾವಣೆಯೂ ಆಗಿಲ್ಲ: ಒಮರ್ ಅಬ್ದುಲ್ಲಾ

ಮೋದಿ ಸರ್ಕಾರದಿಂದ ಜಮ್ಮು–ಕಾಶ್ಮೀರದಲ್ಲಿ ಯಾವ ಬದಲಾವಣೆಯೂ ಆಗಿಲ್ಲ: ಒಮರ್ ಅಬ್ದುಲ್ಲಾ

ಜಮ್ಮು: ಅಮೆರಿಕ ತನ್ನ ನಾಗರಿಕರಿಗೆ ಪ್ರಕಟಿಸಿರುವ ಪ್ರವಾಸ ಮಾರ್ಗಸೂಚಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.


ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಭಾರತ – ಪಾಕಿಸ್ತಾನ ಗಡಿ ಹಾಗೂ ದೇಶದಲ್ಲಿ ನಕ್ಸಲರು ಸಕ್ರಿಯವಾಗಿರುವ ಕೇಂದ್ರ ಹಾಗೂ ಪೂರ್ವದ ಕೆಲವು ಪ್ರದೇಶಗಳಿಗೆ ಭೇಟಿ ನೀಡದಂತೆ ಅಮೆರಿಕ ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಈ ಸಂಬಂಧ ಅಬ್ದುಲ್ಲಾ ಎಕ್ಸ್/ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.


‘ಹೊಸ ಜಮ್ಮು ಮತ್ತು ಕಾಶ್ಮೀರದ ಪಾಲಿಗೆ ಇದು ಅತಿಯಾಯಿತು’ ಎಂದು ಉಲ್ಲೇಖಸಿರುವ ಅವರು, ‘ಸಹಜ ಸ್ಥಿತಿ, ಶಾಂತಿ, ಪ್ರವಾಸೋದ್ಯಮ ಹಾಗೂ ಶ್ರೀನಗರದಲ್ಲಿನ ಜಿ–20 ತಮಾಷೆ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಅಮೆರಿಕ ಸರ್ಕಾರ ತನ್ನ ಪ್ರವಾಸ ಮಾರ್ಗಸೂಚಿಯಲ್ಲಿ ಈಗಲೂ ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸುತ್ತಿದೆ’ ಎಂದು ಹೇಳಿದ್ದಾರೆ.

Join Whatsapp
Exit mobile version