Home ಟಾಪ್ ಸುದ್ದಿಗಳು ಶಿವಲಿಂಗವಲ್ಲ, ಅದು ಕಾರಂಜಿ: ವಿವಾದಕ್ಕೆ ತೆರೆ ಎಳೆದ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ

ಶಿವಲಿಂಗವಲ್ಲ, ಅದು ಕಾರಂಜಿ: ವಿವಾದಕ್ಕೆ ತೆರೆ ಎಳೆದ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿ

ವಾರಾಣಸಿ: ಜ್ಞಾನವಾಪಿ ಮಸೀದಿಯ ಕೊಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನುವ ವಿವಾದಕ್ಕೆ ತೆರೆ ಎಳೆದಿರುವ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿಯು, ಕೊಳದಲ್ಲಿ ಶಿವಲಿಂಗ ಪತ್ತೆಯಾಗಿಲ್ಲ. ಅಲ್ಲಿರುವುದು ಕೇವಲ ಕಾರಂಜಿ ( ಫೌಂಟನ್‌) ಎಂದು ಸ್ಪಷ್ಟನೆ ನೀಡಿದೆ. ಕಾರಂಜಿಯನ್ನೇ ಅವರು ಶಿವಲಿಂಗ ಎಂದು ಅಂದುಕೊಂಡಿದ್ದಾರೆ ಎಂದು ಮಂಡಳಿ ಹೇಳಿದೆ.

ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಯ ಸಂದರ್ಭ ಹಿಂದೂ ಪರ ವಕೀಲರು ಕೊಳದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಿದ್ದು, ಆದರೆ ಇದನ್ನು ಮಸೀದಿಯ ಆಡಳಿತ ಮಂಡಳಿ ತಳ್ಳಿಹಾಕಿದೆ. ಹಾಗೆಯೇ, ಕೊಳಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದನ್ನು ವಿರೋಧಿಸಿದೆ.

ಇನ್ನೊಂದೆಡೆ ಇದು ಕಾರಂಜಿ, ‘ಶಿವಲಿಂಗ’ ಅಲ್ಲ. ಪ್ರತಿ ಮಸೀದಿಯಲ್ಲಿ ಈ ಕಾರಂಜಿ ಇದೆ. ನ್ಯಾಯಾಲಯದ ಆಯುಕ್ತರು ಏಕೆ ಹಕ್ಕು ಮಂಡಿಸಲಿಲ್ಲ? ಸ್ಥಳವನ್ನು ಸೀಲಿಂಗ್ ಮಾಡುವ ಆದೇಶವು 1991 ರ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಓವೈಸಿ ಹೇಳಿದ್ದಾರೆ.

Join Whatsapp
Exit mobile version