Home ಟಾಪ್ ಸುದ್ದಿಗಳು ಇನ್ನು ಮುಂದೆ ದಿನಕ್ಕೆ 24 ಗಂಟೆ ಅಲ್ಲ, 25 ಗಂಟೆ: ಭೂಮಿಯಿಂದ ಇನ್ನಷ್ಟು ದೂರ ಆಗ್ತಾನೆ...

ಇನ್ನು ಮುಂದೆ ದಿನಕ್ಕೆ 24 ಗಂಟೆ ಅಲ್ಲ, 25 ಗಂಟೆ: ಭೂಮಿಯಿಂದ ಇನ್ನಷ್ಟು ದೂರ ಆಗ್ತಾನೆ ಚಂದ್ರ..!

ನವದೆಹಲಿ: ಚಂದ್ರ ಮತ್ತು ಭೂಮಿಯ ನಡುವಿನ ಅಂತರವು ವರ್ಷಗಳು ಕಳೆದಂತೆ ಹೆಚ್ಚುತ್ತಿದೆ. ಇದರ ಪರಿಣಾಮ ದಿನಗಳ ಗಂಟೆಯಲ್ಲಿ ಬದಲಾವಣೆಯಾಗಲಿದೆ ಎಂದು ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ತಿಳಿಸಿದ್ದಾರೆ.


ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ತಂಡವು 90 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಬಂಡೆಯ ಮೇಲೆ ಅಧ್ಯಯನವನ್ನು ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಭೂಮಿಯಿಂದ ಚಂದ್ರನು ಬೇರ್ಪಡುವುದರಿಂದ ಆಗುವ ಪರಿಣಾಮಗಳ ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಭವಿಷ್ಯದ ದಿನಗಳಲ್ಲಿ ಭೂಮಿಯಿಂದ ಚಂದ್ರ ದೂರಕ್ಕೆ ಹೋಗುವ ಅಪಾಯವಿದೆ ಎನ್ನುವ ವಿಚಾರವನ್ನು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.


ಚಂದ್ರನು ಭೂಮಿಯಿಂದ ವರ್ಷಕ್ಕೆ ಸರಿಸುಮಾರು 3.8 ಸೆಂ.ಮೀಟರ್ ಗಳಷ್ಟು ದರದಲ್ಲಿ ದೂರ ಸಾಗುತ್ತಿದ್ದಾನೆ. ಇದರ ಪರಿಣಾಮವು ಭೂಮಿಯಲ್ಲಿರುವ ಒಂದು ದಿನದ ಸಮಯದಲ್ಲಿ ಬದಲಾವಣೆಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಭೂಮಿಯಲ್ಲಿ ಒಂದು ದಿನದ ಅವಧಿ ವಿಸ್ತರಣೆ ಆಗುತ್ತಲೇ ಇದೆ. ಅಂತಿಮವಾಗಿ 200 ದಶಲಕ್ಷ ವರ್ಷಗಳ ಬಳಿಕ ಭೂಮಿಯ ಒಂದು ದಿನದ ಅವಧಿ 24 ಗಂಟೆಗಳ ಬದಲಾಗಿ 25 ಗಂಟೆ ಆಗುತ್ತದೆ ಎಂದಿದ್ದಾರೆ ವಿಜ್ಞಾನಿಗಳು.


ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಎಂಬ ವೈಜ್ಞಾನಿಕ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನವು ಸುಮಾರು 1.4 ಬಿಲಿಯನ್ ವರ್ಷಗಳ ಹಿಂದೆ, ಚಂದ್ರನು ಭೂಮಿಗೆ ಹತ್ತಿರ ಬಂದಾಗ, ಒಂದು ದಿನವು ಕೇವಲ 18 ಗಂಟೆಗಳಿಗಿಂತ ಹೆಚ್ಚು ಕಾಲ ಇತ್ತು ಎಂದು ಬಹಿರಂಗಪಡಿಸಿದೆ. ಭೂಮಿ ಮತ್ತು ಚಂದ್ರನ ನಡುವಿನ ಅಂತರ ಹೆಚ್ಚಾದಂತೆ, ನಮ್ಮ ಗ್ರಹದಲ್ಲಿ ಒಂದು ದಿನದ ಉದ್ದವೂ ಹೆಚ್ಚಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Join Whatsapp
Exit mobile version