ಅಪರಿಚಿತನಿಂದ ನಾರ್ವೆಯಲ್ಲಿ ಗುಂಡಿನ ದಾಳಿ: ಇಬ್ಬರು ಬಲಿ, 14 ಮಂದಿ ಗಂಭೀರ

Prasthutha|

ಓಸ್ಲೋ: ನಾರ್ವೆ ರಾಜಧಾನಿಯ ಓಸ್ಲೋದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಲಂಡನ್ ಪಬ್ ಓಸ್ಲೋದ ಮಧ್ಯಭಾಗದಲ್ಲಿರುವ ಜನಪ್ರಿಯ ನೈಟ್ ಕ್ಲಬ್ ಬಳಿ ಗುಂಡಿನ ದಾಳಿ ನಡೆದಿದ್ದು, ಶಂಕಿತನೋರ್ವನನ್ನು ಪೊಲೀಸರು ಮಧ್ಯರಾತ್ರಿಯೇ ಬಂಧಿಸಿದ್ದಾರೆ.

- Advertisement -

ಪಬ್’ಗೆಂದು ಬಂದಿದ್ದ ಅಪರಿಚತನೋರ್ವ ಬ್ಯಾಗ್ ನಲ್ಲಿ ತಂದಿರಿಸಿದ್ದ ಗನ್ ತೆಗೆದು ಫೈರಿಂಗ್ ನಡೆಸಿದ್ದಾನೆ. ಕ್ಲಬ್ ನಿಂದ ಮುಂದೆ ಸಾಗಿ ಬೀದಿವರೆಗೂ ಫೈರಿಂಗ್ ಮಾಡುತ್ತಲೇ ಸಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬ ತಿಳಿಸಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಘಟನೆಯಲ್ಲಿ ಇಬ್ಬರು ಮೃತಪಟ್ಟು, 14 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಫೈರಿಂಗ್ ಗೆ ಸ್ಪಷ್ಟ ಕಾರಣ ತನಿಖೆಯ ಬಳಿಕವೇ ತಿಳಿಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp