Home ಟಾಪ್ ಸುದ್ದಿಗಳು ಬಿಸಿಲಿನ ಝುಳಕ್ಕೆ ತತ್ತರಿಸುತ್ತಿರುವ ಉತ್ತರ ಭಾರತ: ರಾಜಸ್ಥಾನದಲ್ಲಿ ಐವರು ಮೃತ

ಬಿಸಿಲಿನ ಝುಳಕ್ಕೆ ತತ್ತರಿಸುತ್ತಿರುವ ಉತ್ತರ ಭಾರತ: ರಾಜಸ್ಥಾನದಲ್ಲಿ ಐವರು ಮೃತ

ನವದೆಹಲಿ: ಉತ್ತರ ಭಾರತ ತೀವ್ರ ಬಿಸಿಲಿನ ಝುಳಕ್ಕೆ ತತ್ತರಿಸುತ್ತಿದೆ. ರಾಜಸ್ಥಾನದ ಬಾರ್ಮರ್​ನಲ್ಲಿ ಗರಿಷ್ಠ ತಾಪಮಾನ 48 ಡಿಗ್ರಿ ಸೆಲ್ಸಿಯಸ್ ದಾಟಿದೆ. ರಾಜಸ್ಥಾನದಲ್ಲಿ ತಾಪಮಾನ ಏರಿಕೆ ಕಾರಣ ಗುರುವಾರ ಐವರು ಮೃತಪಟ್ಟಿದ್ದಾರೆ.

ಬಾರ್ಮರ್​ನಲ್ಲಿ 48.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಖೈರ್ತಾಲ್ ಜಿಲ್ಲೆಯಲ್ಲಿ ಹಲವು ಪ್ರಾಣಿ, ಪಕ್ಷಿಗಳು ಸತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫಲೋಡಿಯಲ್ಲಿ 48.6 ಡಿಗ್ರಿ ಸೆಲ್ಸಿಯಸ್, ಫತೇಪುರ್​ದಲ್ಲಿ 47.6 ಡಿಗ್ರಿ ಸೆಲ್ಸಿಯಸ್, ಜೈಸಲ್ಮೇರ್​ನಲ್ಲಿ 47.5 ಡಿಗ್ರಿ ಸೆ., ಜೋಧ್​ಪುರ 47.4 ಡಿಗ್ರಿ ಸೆ., ಜಲೋರ್ 47.3 ಡಿಗ್ರಿ ಸೆ., ಕೋಟಾದಲ್ಲಿ 47.4 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ.

ಮುಂದಿನ ದಿನಗಳಲ್ಲಿ ರಾಜಸ್ಥಾನದಲ್ಲಿ ತಾಪಮಾನ 50 ಡಿಗ್ರಿ ತಲುಪಬಹುದು ಎಂದು ಅಂದಾಜು ಮಾಡಲಾಗಿದೆ. ರಾಜ್ಯದ 19 ನಗರಗಳಲ್ಲಿ ತಾಪಮಾನ 45 ಡಿಗ್ರಿಗಿಂತ ಹೆಚ್ಚು ದಾಖಲಾಗಿದೆ.

ಹವಾಮಾನ ಇಲಾಖೆಯು ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಬಿಸಿಗಾಳಿ ಅಲರ್ಟ್ ಘೊಷಿಸಿದೆ. ಜತೆಗೆ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದಲ್ಲೂ ಎಚ್ಚರಿಕೆ ನೀಡಲಾಗಿದೆ.

ಗುಜರಾತ್​ನ ಅಹಮದಾಬಾದ್ ಮತ್ತು ಗಾಂಧಿನಗರದಲ್ಲಿ ಎರಡು ದಿನ ರೆಡ್ ಅಲರ್ಟ್ ಘೊಷಿಸಲಾಗಿದೆ. ರಾತ್ರಿ 10 ಗಂಟೆಯವರೆಗೂ 40 ಡಿಗ್ರಿ ಸೆ. ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಾಲ್ಕು ದಿನಗಳ ನಂತರ ತಾಪಮಾನ 2-3 ಡಿಗ್ರಿಗಳಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ಈ ವರ್ಷ ಮೊದಲ ಬಾರಿಗೆ ಕಾಶ್ಮೀರಕ್ಕೂ ಹೀಟ್​ವೇವ್ ಅಪ್ಪಳಿಸಿದೆ. ಮುಂದಿನ 5 ದಿನಗಳ ಕಾಲ ರಾಜಸ್ಥಾನ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ತಾಪಮಾನ 44 ಡಿಗ್ರಿಗಿಂತ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Join Whatsapp
Exit mobile version