Home ಟಾಪ್ ಸುದ್ದಿಗಳು ಅನಿವಾಸಿ ಕನ್ನಡಿಗರ ಯೋಗಕ್ಷೇಮ, ಅಭಿವೃದ್ಧಿಗಾಗಿ ಸರಕಾರ ಕ್ರಮ ಕೈಗೊಳ್ಳಬೇಕು: ಬಿ.ಎಂ. ಫಾರೂಕ್

ಅನಿವಾಸಿ ಕನ್ನಡಿಗರ ಯೋಗಕ್ಷೇಮ, ಅಭಿವೃದ್ಧಿಗಾಗಿ ಸರಕಾರ ಕ್ರಮ ಕೈಗೊಳ್ಳಬೇಕು: ಬಿ.ಎಂ. ಫಾರೂಕ್

ಬೆಂಗಳೂರು: ಅನಿವಾಸಿ ಕನ್ನಡಿಗರ ಯೋಗಕ್ಷೇಮ ಮತ್ತು ಅಭಿವೃದ್ದಿಗಾಗಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಸದಸ್ಯ ಬಿ.ಎಂ.ಫಾರೂಕ್ ಆಗ್ರಹಿಸಿದ್ದಾರೆ.


ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು, ಅನಿವಾಸಿ ಭಾರತೀಯರ ಯೋಗಕ್ಷೇಮಕ್ಕಾಗಿ ಕೇರಳ, ಆಂಧ್ರ ಮತ್ತು ತೆಲಂಗಾಣ ಸರಕಾರಗಳು ಮುಂದಾಗಿವೆ. ಕರ್ನಾಟಕ ರಾಜ್ಯದ ಆರ್ಥಿಕತೆಯ ಮೇಲೂ ಸ್ಥೂಲ ಪರಿಣಾಮ ಬೀರುವುದರಿಂದ ಸರಕಾರ ಗಂಭೀರವಾಗಿ ಆಲೋಚನೆ ನಡೆಸಬೇಕು ಎಂದರು.


ಅನಿವಾಸಿ ಭಾರತೀಯರು ನಾಲ್ಕು ದಶಕಗಳಿಂದ ಉದ್ಯೋಗವನ್ನು ಅರಸಿ ಗಲ್ಫ್ ರಾಷ್ಟ್ರಗಳಿಗೆ ಬಂದ ಕಾರಣ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಆರ್ಥಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಬದಲಾವಣೆಗಳು ಮತ್ತು ಕ್ರಾಂತಿಗಳೇ ನಡೆದಿವೆ. ಕರ್ನಾಟಕದ ಹಲವು ಕುಟುಂಬಗಳು ಇಲ್ಲಿ ನೆಲೆಸಿವೆ. ಅದರಲ್ಲೂ ಕರಾವಳಿ ಭಾಗದ ಹಲವು ಕುಟುಂಬಗಳಿಗೆ ಇಲ್ಲಿನ ಆದಾಯವು ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.

Join Whatsapp
Exit mobile version