Home ಟಾಪ್ ಸುದ್ದಿಗಳು ಮಕ್ಕಳೊಂದಿಗೆ ಪಾಕ್‌ನಿಂದ ಬಂದಿದ್ದ ಸೀಮಾ ಹೈದರ್‌ಗೆ ನೋಯ್ಡಾ ಕೋರ್ಟ್ ಸಮನ್ಸ್

ಮಕ್ಕಳೊಂದಿಗೆ ಪಾಕ್‌ನಿಂದ ಬಂದಿದ್ದ ಸೀಮಾ ಹೈದರ್‌ಗೆ ನೋಯ್ಡಾ ಕೋರ್ಟ್ ಸಮನ್ಸ್

ನೋಯ್ಡಾ: ಗಂಡನನ್ನು ಬಿಟ್ಟು ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದು ಸಚಿನ್​ ಎಂಬಾತನನ್ನು ಮದುವೆಯಾಗಿ ಭಾರತದಲ್ಲಿ ಜೀವಿಸುತ್ತಿರುವ ಸೀಮಾ ಹೈದರ್‌ಗೆ ಕೋರ್ಟ್​ ಸಮನ್ಸ್​ ಜಾರಿ ಮಾಡಿದೆ.

ಕರಾಚಿಯಲ್ಲಿ ನೆಲೆಸಿರುವ, ಸೀಮಾ ಮೊದಲ ಪತಿ ಗುಲಾಮ್ ಹೈದರ್ ಭಾರತೀಯ ವಕೀಲರ ಮೂಲಕ ನೋಯ್ಡಾದ ಕೌಟುಂಬಿಕ ನ್ಯಾಯಾಲಯದಲ್ಲಿ ಸೀಮಾ ಅವರ ಹೊಅ ವಿವಾಹದ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಗುಲಾಮ್ ಹೈದರ್ ತನ್ನ ಮಕ್ಕಳ ಧಾರ್ಮಿಕ ಮತಾಂತರವನ್ನು ಪ್ರಶ್ನಿಸಿದ್ದರು. ಗುಲಾಮ್ ಹೈದರ್ ಅವರ ವಕೀಲ ಮೊಮಿನ್ ಮಲಿಕ್, ಗುಲಾಮ್ ಹೈದರ್‌ನಿಂದ ಸೀಮಾ ವಿಚ್ಛೇದನ ಪಡೆದಿಲ್ಲ. ಸಚಿನ್ ಜೊತೆಗಿನ ಅವರ ಮದುವೆ ಮಾನ್ಯವಾಗಿಲ್ಲ ಎಂದು ಕೋರ್ಟ್​ನಲ್ಲಿ ವಾದಿಸಿದ್ದಾರೆ. ಈ ಹಿನ್ನೆಲೆ ಮೇ 27ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೀಮಾಗೆ ನೋಯ್ಡಾ ನ್ಯಾಯಾಲಯ ಸೂಚಿಸಲಾಗಿದೆ.

ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಅಪ್ರಾಪ್ತ ವಯಸ್ಸಿನ ಮಕ್ಕಳ ಧಾರ್ಮಿಕ ಮತಾಂತರವನ್ನು ನಿಷೇಧಿಸಲಾಗಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಬರ್ನಿ ಹೇಳಿದ್ದಾರೆ.

Join Whatsapp
Exit mobile version