ಅಹಮದಾಬಾದ್: ಗುಜರಾತ್’ನ ಮೊರ್ಬಿ ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, 135 ಜನರ ಸಾವಿಗೆ ಕಾರಣವಾದ ಈ ದುರಂತದ ಹೊಣೆ ಹೊತ್ತು ಇದುವರೆಗೂ ಯಾರೂ ರಾಜೀನಾಮೆ ಸಲ್ಲಿಸಿಲ್ಲ. ಕೊನೆ ಪಕ್ಷ ಕ್ಷಮೆ ಕೂಡ ಕೇಳಿಲ್ಲ. ನನಗೆ ತಿಳಿದಿರುವಂತೆ ಇಂತಹ ದೊಡ್ಡ ದುರಂತ ನಡೆದ ಹೊರತಾಗಿಯೂ ಇದಕ್ಕೆ ಸಂಬಂಧಿಸಿದಂತೆ ಯಾರೂ ಕ್ಷಮೆಯಾಚಿಸಿಲ್ಲ ಎಂದರೆ ಇದಕ್ಕೆ ಬಿಜೆಪಿಯ ದುರಹಂಕಾರವೇ ಕಾರಣ. ವಿದೇಶದಲ್ಲಿ ಇಂತಹ ಘಟನೆ ನಡೆದಿದ್ದರೆ ತಕ್ಷಣ ರಾಜೀನಾಮೆ ನೀಡುತ್ತಿದ್ದರು ಎಂದು ಹೇಳಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲುತ್ತೇವೆ ಎಂದು ಸರ್ಕಾರ ಭಾವಿಸಿರುವುದರಿಂದ ಇಂತಹ ದೊಡ್ಡ ಬೇಜವಾಬ್ದಾರಿಗೆ ಕ್ಷಮೆಯಾಚಿಸಲಿಲ್ಲ ಎಂದು ವಿಶ್ಲೇಷಿಸಿದ್ಧಾರೆ.
ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಪ್ರಚಾರಕ್ಕಾಗಿ ಇಲ್ಲಿಗೆ ಬಂದಿದ್ದ ಪಿ. ಚಿದಂಬರಂ ಅವರು ಗುಜರಾತ್ ಅನ್ನು ದೆಹಲಿಯಿಂದ ನಿಯಂತ್ರಿಸಲಾಗುತ್ತಿದೆಯೇ ಹೊರತು ರಾಜ್ಯದ ಮುಖ್ಯಮಂತ್ರಿಯಿಂದಲ್ಲ ಎಂದು ಹೇಳಿದ್ದಾರೆ.