Home ಕರಾವಳಿ ದೇಶವೇ ಕೋವಿಡ್ ಗೆ ತತ್ತರಿಸಿದ್ದರೂ ಉಳ್ಳಾಲದ ಸೋಮೇಶ್ವರ ಬ್ರಹ್ಮ ರಥೋತ್ಸವಕ್ಕಿಲ್ಲ ಯಾವುದೇ ತಡೆ !

ದೇಶವೇ ಕೋವಿಡ್ ಗೆ ತತ್ತರಿಸಿದ್ದರೂ ಉಳ್ಳಾಲದ ಸೋಮೇಶ್ವರ ಬ್ರಹ್ಮ ರಥೋತ್ಸವಕ್ಕಿಲ್ಲ ಯಾವುದೇ ತಡೆ !

►ಸರಕಾರದ ಆದೇಶ ಉಲ್ಲಂಘನೆ, ಮಾಸ್ಕ್ ಇಲ್ಲ ಸಾಮಾಜಿಕ ಅಂತರವಿಲ್ಲ !
►ಅಸಿಸ್ಟಂಟ್ ಕಮಿಷನರ್ ಎಚ್ಚರಿಕೆಗೂ ಕಿಮ್ಮತ್ತಿನ ಬೆಲೆಯಿಲ್ಲ!

ಮಂಗಳೂರು : ನಗರದ ಉಳ್ಳಾಲ ಸೋಮೇಶ್ವರದ ಸೋಮನಾಥ ದೇವಸ್ಥಾನದ ಬ್ರಹ್ಮ ರಥೋತ್ಸವ ಕಾರ್ಯಕ್ರಮ ನಿನ್ನೆ ರಾತ್ರಿ ನಡೆದಿದ್ದು, ಕೋವಿಡ್ ನಿಗ್ರಹಕ್ಕೆ ಸರಕಾರದ ಯಾವುದೇ ಆದೇಶಗಳು ಈ ದೇವಸ್ಥಾನಕ್ಕೆ ಅನ್ವಯವಾಗುವುದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ನಿನ್ನೆಯಷ್ಟೇ ಅಸಿಸ್ಟಂಟ್ ಕಮಿಷನರ್ ಮದನ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ ರಥೋತ್ಸವ ನಡೆಸದಂತೆ ಎಚ್ಚರಿಕೆಯನ್ನು ಕೂಡಾ ನೀಡಲಾಗಿತ್ತು. ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕಡೆಗಣಿಸಿ ನಿನ್ನೆ ರಾತ್ರಿ ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಸಾವಿರಾರು ಜನರನ್ನು ಸೇರಿಸಿ ಬ್ರಹ್ಮ ರಥೋತ್ಸವ ನಡೆಸಿದ್ದಾರೆ.  ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೆಲ ದಿನಗಳ ಹಿಂದಷ್ಟೇ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ಪೊಲೀಸರು ಪ್ರಕರಣವನ್ನೂ ದಾಖಲಿಸಿದ್ದರು.

ನಿನ್ನೆಯ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲಿಸದೆ ಇರುವುದು ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೀಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ದಿನ 500 ಕ್ಕಿಂತಲೂ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದೆ. ಇದರ ಬೆನ್ನಲ್ಲೇ ಈ ರಥೋತ್ಸವ ನಡೆದಿರುವುದು ಆಡಳಿತ ಸಮಿತಿಯು ಸರಕಾರದ ಕಾನೂನು ಮತ್ತು ಪೊಲೀಸರಿಗೆ ನಮ್ಮಲ್ಲಿ ಕಿಮ್ಮತ್ತಿನ ಬೆಲೆ ನೀಡಿಲ್ಲವೆನ್ನುವುದು ಸ್ಪಷ್ಟವಾಗಿದೆ. ಪೊಲೀಸ್ ಇಲಾಖೆ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ದೇಶವೇ ಕೋವಿಡ್ ಗೆ ತತ್ತರಿಸಿದ್ದರೂ ಉಳ್ಳಾಲದ ಸೋಮೇಶ್ವರ ಬ್ರಹ್ಮ ರಥೋತ್ಸವಕ್ಕಿಲ್ಲ ತಡೆ ! Mass gathering in Temple
Join Whatsapp
Exit mobile version