Home ಕರಾವಳಿ ಕಾಪು, ಮುಲ್ಕಿ ಬಳಿಕ ಪುತ್ತೂರಿಗೂ ವ್ಯಾಪಿಸಿದ “ಹಿಂದೂಯೇತರರಿಗೆ ವ್ಯಾಪಾರ ನಿಷಿದ್ಧ” ಆದೇಶ!

ಕಾಪು, ಮುಲ್ಕಿ ಬಳಿಕ ಪುತ್ತೂರಿಗೂ ವ್ಯಾಪಿಸಿದ “ಹಿಂದೂಯೇತರರಿಗೆ ವ್ಯಾಪಾರ ನಿಷಿದ್ಧ” ಆದೇಶ!

ಪುತ್ತೂರು: ಕರಾವಳಿಯಲ್ಲಿ ಚಾಲ್ತಿಯಲ್ಲಿರುವ ಹಿಂದೂಯೇತರರಿಗಿಲ್ಲ ವ್ಯಾಪಾರಕ್ಕೆ ಅವಕಾಶ ಎನ್ನುವ ಆದೇಶ ಕಾಪು, ಮುಲ್ಕಿ ಬಳಿಕ ಇದೀಗ ಪುತ್ತೂರಿಗೂ ವ್ಯಾಪಿಸಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವಕ್ಕೆ ಹಿಂದೂಯೇತರರ ವ್ಯಾಪಾರಕ್ಕೆ ತಡೆಹಿಡಿಯಲಾಗಿದೆ.


ಎ.10ರಿಂದ 20ರ ತನಕ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ಹಿಂದೂ ಬಾಂಧವರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಜಾತ್ರೋತ್ಸವದ ತಾತ್ಕಾಲಿಕ ಸಂತೆ ಏಲಂ ಪ್ರಕಟಣೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಪ್ರಕಟಣೆಯಲ್ಲಿ `ಹಿಂದೂ ಬಾಂಧವರಿಗೆ ಮಾತ್ರ ಏಲಂನಲ್ಲಿ ಭಾಗವಹಿಸಲು ಅವಕಾಶ ಇದೆ ಎಂದು ಬರೆಯಲಾಗಿದೆ.

Join Whatsapp
Exit mobile version