Home ಟಾಪ್ ಸುದ್ದಿಗಳು ದೇಶದಲ್ಲಿ ಕ್ರಿಪ್ಟೋಕರೆನ್ಸಿ ಮೇಲೆ ನಿರ್ಬಂಧವಿಲ್ಲ: ನಿರ್ಮಲಾ ಸೀತಾರಾಮನ್

ದೇಶದಲ್ಲಿ ಕ್ರಿಪ್ಟೋಕರೆನ್ಸಿ ಮೇಲೆ ನಿರ್ಬಂಧವಿಲ್ಲ: ನಿರ್ಮಲಾ ಸೀತಾರಾಮನ್

ನವದೆಹಲಿ: ಬಿಟ್ ಕಾಯಿನ್ ಅನ್ನು ದೇಶದಲ್ಲಿ ಯಾವುದೇ ರೀತಿಯ ಕರೆನ್ಸಿಯಾಗಿ ಗುರುತಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರವು ಹೊಂದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಲ್ಲದೇ ದೇಶದಲ್ಲಿ ಕ್ರಿಪ್ಟೋಕರೆನ್ಸಿ ಮೇಲೆ ನಿರ್ಬಂಧವನ್ನು ನಾವು ಹೇರುವುದಿಲ್ಲ ಮತ್ತು ಬಿಟ್ ಕಾಯಿನ್ ವಹಿವಾಟಿನ ಬಗ್ಗೆ ಸರ್ಕಾರವು ಅಂಕಿ-ಅಂಶಗಳನ್ನು ಸಂಗ್ರಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.


ರಾಜ್ಯಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಕ್ರಿಪ್ಟೋಕರೆನ್ಸಿ ವ್ಯವಹಾರವನ್ನು ಅಪಾಯಕಾರಿ ವ್ಯಕ್ತಿಗಳು ನಿಯಂತ್ರಿಸುವುದನ್ನು ತಪ್ಪಿಸುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆ. ಅಲ್ಲದೇ ಈ ಕುರಿತು ಕರಡು ಮಸೂದೆ ಸಿದ್ಧವಾಗುವವರೆಗೂ ಕಾಯೋಣ ಎಂದು ನಿರ್ಮಲಾ ಹೇಳಿದ್ದಾರೆ.


ಕೇಂದ್ರ ಸರ್ಕಾರವು ಕ್ರಿಪ್ಟೋ ವ್ಯವಹಾರದ ಕುರಿತು ಕರಡು ಮಸೂದೆಯನ್ನು ರಚಿಸುತ್ತಿದ್ದು, ಸಂಸತ್ತಿನಲ್ಲಿ ಮೊದಲು ಈ ವಿಚಾರ ಚರ್ಚೆಗೆ ಬರಲಿ ಎಂದಿದ್ದಾರೆ. ಆ ಬಳಿಕವೇ ಜಾಹೀರಾತುಗಳನ್ನೂ ಒಳಗೊಂಡಂತೆ ಇಡೀ ಕ್ರಿಪ್ಟೋ ವ್ಯವಹಾರದ ಬಗೆಗೆ ಸೂಕ್ತ ಹಾಗೂ ಅಂತಿಮ ತೀರ್ಮಾನವನ್ನು ನಾವು ಕೈಗೊಳ್ಳಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Join Whatsapp
Exit mobile version